ನಿಜಶರಣರ ತತ್ವ ಆದರ್ಶಗಳನ್ನ ಅಳವಡಿಸಿಕೊಳ್ಳಿ : ಡಾ. ಅಜಯಸಿಂಗ್

ಜೇವರ್ಗಿ:ಜ.24: ಕಾಯಕವನ್ನೆ ತನ್ನ ಜೀವನವಾಗಿಸಿಕೊಂಡ ಶರಣ, ಸದಾ ನಿಜವನ್ನೆ ನುಡಿಯುವ ಶರಣರೆಂದರೆ ನಿಜಶರಣ ಅಂಬಿಗರ ಚೌಡಯ್ಯ ನವರು. ಅವರ ತತ್ವ ಆದರ್ಶಗಳನ್ನ ನಮ್ಮ ಇಂದಿನ ಪಿಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ಅಭಿಮತಪಟ್ಟರು.
ಪಟ್ಟಣದ ಮಿನಿ ವಿದಾನಸೌದ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ಅಂಬಿಗರ ಚೌಡಯ್ಯ ಭವನದಿಂದ ಮಿನಿ ವಿಧಾನ ಸೌಧದ ಆವರಣದವರೆಗೆ ಭಾವಚಿತ್ರ ಮೆರವಣಿಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಡಾ. ಅಜಯಸಿಂಗ ಮಾತನಾಡಿ ಪ್ರಪಂಚದಲ್ಲಿ ಯಾವುದೆ ಕಾಯಕ ದೊಡ್ಡದಲ್ಲ, ಅವರರವರ ವೃತ್ತಿ (ಕಾಯಕ) ಅವರರವರಿಗೆ ಶ್ರೇಷ್ಠ ಎಂಬುವುದನ್ನ ನಾವು ಮರೆಯಬಾರದು ಹಾಗೂ ಗೌರವಿಸಬೇಕು. ನಮ್ಮ ಪ್ರಸ್ಥುತ ಕಾಲದಲ್ಲಿ ಕೂಡ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಅನ್ವಯಿಸುತ್ತವೆ. ತಮ್ಮ ಜೀವನದಲ್ಲಿ ಸದಾ ಸತ್ಯವನ್ನ ಹೆಳುತ್ತಿದ್ದರು. ತಮ್ಮ ಜೀವನದಲ್ಲಿ ನಡೆದ ಘಟನೆಯನ್ನ ಅತವ ಇದ್ದದ್ದು ಇದ್ದಂತೆ ಹೆಳುವುದರ ಮುಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. 12 ನೇ ಶತಮಾನದಲ್ಲಿ ತಮ್ಮ ನಿಜ ನುಡುಗಳಿಂದ ಜನರಿಗೆ ಚಿರಪರಿಚಿತರಾಗಿದ್ದರು.
ಈ ದೇಶದಲ್ಲಿ ಪ್ರತಿಯೋಬ್ಬರು ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳನ್ನ ಪಾಲಿಸಬೇಕು. ಅವರ ತತ್ವ ಆದರ್ಶಗಳು ಅನುಸರಿಸಿದರೆ ಈ ದೇಶದಲ್ಲಿ ಸಮಾನತೆ ಕಾಣಬಹುದು. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಆಶಯ ಕೂಡ ಅದಾಗಿದೆ. ಆದ್ದರಿಂದ ನಮ್ಮ ಯುವಕರು ಶಿಕ್ಷೀತರಾಗಿ ಚೌಡಯ್ಯನವರ ಕನಸು ನನಸಾಗಿಸಬೇಕೆಂದು ತಿಳಿಸಿದರು.
ನಂತರ ಸಂಗಣ್ಣ ಇಟಗಾ ಮಾತನಾಡಿ ನಮ್ಮ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಉದ್ಯೋಗದಲ್ಲಿ ಮುಂದುವರೆಯಬೇಕು. ನಮ್ಮ ಸಮಾಜದ ಏಳಿಗೆಗೆ ಶಿಕ್ಷಣವಂತರು ಶ್ರಮಿಸಬೇಕು. ಬಡ ಜನರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡಬೇಕೆಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಣ್ಣ ಎಸ್ . ಯಲಗೋಡೆ, ಶಿವರಾಜ ಪಾಟೀಲ್ ರದ್ದೆವಾಡಗಿ, ಶ್ರೀ ಸಂಗಣ್ಣ ಇಟಗಾ ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ, ಡಾ. ಸರ್ದಾರ ರಾಯಪ್ಪ , ಅಬ್ದುಲ ನಬಿ, ಶಂಬುಲಿಂಗ ದೇಸಾಯಿ, ಡಾ. ಸಿದ್ದು ಪಾಟೀಲ್, ಉಮೇಶ ನಾಯಕ್, ಸಿದ್ದಣ್ಣ ಸಾಹು, ಶೋಭಾ ಸಜ್ಜನ್, ಮೋನಮ್ಮ ವಿಶ್ವಕರ್ಮ, ಸುಮಂಗಲಾ ಹೂಗಾರ, ಮಹದೇವಿ ಶಿವಪುಂಜೆ, ಗುಡುಲಾಲ್ ಶೇಕ್, ಸಾಯಬಣ್ಣ ಕಲ್ಯಾನಕರ್, ಶೋಭಾ ಭಾನಿ, ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕುಡಲಗಿ, ರೇವಣಸಿದ್ದಪ್ಪ ಕಾಮನಮನಿ, ಕಾಶಿರಾಯ ಯಲಗೋಡ, ವಿಜಯಕುಮಾರ ಹಿರೇಮಠ, ಚಂದ್ರಶೇಖರ ನೇರಡಗಿ, ಕಾಂತಪ್ಪ ಚನ್ನೂರ, ರಾಜು ತಳವಾರ, ಗಿರೀಶ ತುಂಬಗಿ, ನಾಗರಾಜ ವಿ ಟಿ, ಎಸ್ ಕೆ ಬಿರಾದಾರ, ಸಂತೋಷ ಜೈನಾಪೂರ, ಗುರು ಜೈನಾಪೂರ, ಬಾಗೇಸ ಹೊತಿನಮಡು, ಸುನಿಲಕುಮಾರ, ದೇವು ಜೈನಾಪೂರ, ಪರಮೇಶ ಬಿರಾಳ ಉಪಸ್ಥಿತರಿದ್ದರು.