ನಿಜಲಿಂಗಪ್ಪ ಕಾಲೋನಿ: ಕಾಂಗ್ರೆಸ್ ಸೇರ್ಪಡೆಯಾದ ನೂರಾರು ಯುವಕರು

ರಾಯಚೂರು,ಮಾ.೨೯- ವಾರ್ಡ್ ನಂ. ೫ ನಿಜಲಿಂಗಪ್ಪ ಕಾಲೋನಿ, ಕುಲಸುಂಬಿ ಕಾಲೋನಿ, ಮಾರುತಿ ನಗರ, ರಾಮನಗರ ಸೇರಿದಂತೆ ವಿವಿಧ ಬಡಾವಣೆಯ ನೂರಾರು ಯುವಕರು ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಜನಪರ ಕಾಳಜಿ ಆಡಳಿತ ಮೆಚ್ಚಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಹಾಗೂ ಮುಖಂಡರಾದ ರುದ್ರಪ್ಪ ಅಂಗಡಿ, ಮಹಾಲಿಂಗಪ್ಪ ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ನಿಜಲಿಂಗಪ್ಪ ಕಾಲೋನಿಯ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ಅವರ ನಿವಾಸ ದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷ ಸೇರ್ಪಡೆಯಲ್ಲಿ ಮೌನೇಶ ಕುಮಾರ, ವಿಜಯ, ಸುನ್ಯ ವಿನೋಧ ಕುಮಾರ, ಅಮಿತ್, ಬಸವರಾಜು, ಪ್ರವಣ, ವಿನೋದ್, ಸಂಜಯ್ಯ, ರವಿ, ವೀರೇಶ, ಪ್ರಶಾಂತ, ರಮೇಶ್, ರಾಜು, ಕ್ರಿಷ್ಣ, ಆಕಾಶ, ಅಕ್ಷಯ್, ಶಿವು, ಅಮೃತ್, ಹುಸೇನ್, ಶಿವು, ಮಾರುತಿ, ಅರವಿಂದ್, ಆದಿ ನಾಯಕ್, ಸೋನಾರ್,ಅಲ್ತಾಫ್, ಇಸ್ಮೈಲ್, ವೀರೇಶ್, ಮಲ್ಲು, ನರಸಿಂಹ, ಸಾಗರ್, ಶಶಿ, ಬೀರೇಂದ್ರ ಸೇರಿದಂತೆ ಅನೇಕರು ಪಕ್ಷಕ್ಕೆ ಸೇರ್ಪಡೆಯಾದರು.