ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಲಕ್ಷ್ಮಣ ಸವದಿ ವಿಶ್ವಾಸ

ಅಥಣಿ :ಮೇ.11: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಇಂದು ಮತಕ್ಷೇತ್ರದ ವ್ಯಾಪ್ತಿಯ ಅವರ ಸ್ವಗ್ರಾಮ ನಾಗನೂರ ಪಿಕೆ ಗ್ರಾಮದಲ್ಲಿ ತಮ್ಮ ಸುಪುತ್ರ ರೊಂದಿಗೆ ಸರತಿ ಸಾಲಿನಲ್ಲಿ ನಿಂತು ಭಾಗ ಸಂಖ್ಯೆ 204 ರಲ್ಲಿ ಮತ ಚಲಾವಣೆ ಮಾಡಿದರು,
ಮತ ಚಲಾವಣೆ ಮೊದಲು ಗ್ರಾಮ ದೇವತೆ ಮಹಾಲಕ್ಷ್ಮಿ ದೇವಿಯು ದರ್ಶನ ಪಡೆದ ಸವದಿ ಕುಟುಂಬದವರು,
ಈ ವೇಳೆ ಮಾಧ್ಯಮದವರೊಂದಿಗೆ ಲಕ್ಷ್ಮಣ ಸವದಿ ಅವರು ಮಾತನಾಡಿ ರಾಜ್ಯದಲ್ಲಿ ಕನಿಷ್ಠ 125 ರಿಂದ 135 ಸ್ಥಾನಗಳ ಗೆಲುವಿನೊಂದಿಗೆ ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾನು ಕಳೆದ 25 ದಿನದ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ
ನಾನು ಡಿಸಿಎಂ ಸೇರಿದಂತೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ನಾನು ಸಚಿವ ಸ್ಥಾನದ ಬೇಡಿಕೆಯೂ ಇಟ್ಟಿಲ್ಲ, ಸರ್ಕಾರ ಅಧಿಕಾರಕ್ಕೆ ಬಂದರೆ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬೇಡಿದ್ದೇನೆ, ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಮಂತ್ರಿಯಾಗುವ ಹವ್ಯಾಸ ನನಗಿಲ್ಲ, ಎಂದ ಅವರು ಕ್ಷೇತ್ರದ ಜನತೆ ನನ್ನ ಬೆನ್ನಿಗೆ ನಿಂತಿದ್ದಾರೆ ಈ ಹಿಂದೆ 25 ವರ್ಷಗಳಿಂದ ನಾನು ಮಾಡಿದ ಜನಸೇವೆಯೇ ನನಗೆ ಬಹಳ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತೇನೆ,
ವಿರೋಧ ಪಕ್ಷಗಳ ಅನೇಕ ಮುಖಂಡರು ಬೇರೆ ಬೇರೆ ಪಕ್ಷದವರು ಅನೇಕ ಟೀಕೆ ಟಿಪ್ಪಣಿಗಳನ್ನು ಮಾಡಿದ್ದಾರೆ ಅದಕ್ಕೆ ಇಂದು ಕ್ಷೇತ್ರದ ಮತದಾರರು ಅವರಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂದರು,
ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಹೈಕಮಾಂಡ್ ಹಾಗೂ ಶಾಸಕಾಂಗ ಪಕ್ಷದ ತಿರ್ಮಾನ ಮೇಲೆ ಸಿಎಂ ಆಯ್ಕೆ ಎಂದರು,