ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ

ಕೆಂಭಾವಿ:ಸೆ.22:ಪಟ್ಟಣದ ಜಿಪಂ ಮಾಜಿ ಅಧ್ಯಕ್ಷರಾದ ಸಿದ್ದನಗೌಡ ಪೆÇೀಲೀಸ ಪಾಟೀಲ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ವತಿಯಿಂದ ಉಪ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಈ ವೇಳೆ ಮಾತನಾಡಿದ ಸಮಿತಿಯ ಪದಾಧಿಕಾರಿಗಳು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಈ ಭಾಗದ ಪ್ರಭಾವಿ ರಾಜಕಾರಣಿಯಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಸಚಿವ ಸ್ಥಾನ ಪಡೆದಿದ್ದಾರೆ.ಶಹಾಪೂರ ಮತಕ್ಷೇತ್ರದ ಕೇಂದ್ರ ಬಿಂದು ಎಂದೇ ಗುರುತಿಸಿಕೊಂಡಿರುವ ಕೆಂಭಾವಿ ಪಟ್ಟಣದ ಹಿರಿಯ ರಾಜಕಾರಣಿ ಹಾಗೂ ಕಾಂಗ್ರೇಸ ಪಕ್ಷದ ಕಟ್ಟಾಳು ಸಿದ್ದನಗೌಡ ಪೆÇೀ.ಪಾಟೀಲರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡುವಂತೆ ಆಗ್ರಹಿಸಿದರು.ಯಲ್ಲಪ್ಪ ಬಾವಿಮನಿ,ಬಸವರಾಜ ಬಸರಿಗಿಡ,ಜಟ್ಟೆಪ್ಪ ಮುಷ್ಠಳ್ಳಿ ,ಅಲ್ತಾಫ ಖುರೇಶಿ,ಅರುಣ,ಮರೆಪ್ಪ,ರಮೇಶಸಾವಳಗಿ
ರಾಜು ,ಮಲ್ಲು ಅರಳಗುಂಡಗಿ,ಅಯ್ಯಪ್ಪ ಸೇರಿದಂತೆ ಹಲವರಿದ್ದರು,