ನಿಗಮ ಮಂಡಳಿಯ ಸಾಲಮನ್ನಾ ಮಾಡಲು ಯಖೂಬ್ ಕೊಟ್ಟೂರು ಒತ್ತಾಯ

ದಾವಣಗೆರೆ.ಜೂ.೧೪: ಹಿಂದುಳಿದ ವರ್ಗಗಳ ಫಲಾನು ಭವಿಗಳಿಗೆ ನಿಗಮ ಮಂಡಳಿಗಳಿAದ ಕೊಟ್ಟಿರುವ ಸಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನ್ನಾ ಮಾಡಬೇಕೆಂದು ಸುವರ್ಣ ಕರ್ನಾಟಕ ಹಿತಾ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಯಖೂಬ್ ಕೊಟ್ಟೂರು ಮನವಿ ಮಾಡಿದ್ದಾರೆ.ಸ್ವಯಂ ಉದ್ಯೋಗದಿಂದ ತಮ್ಮ ಜೀವನ ರೂಪಿಸಿಕೊಳ್ಳಲು ಬಡವರು ನಿಗಮ ಮಂಡಳಿಗಳಲ್ಲಿ ಸಣ್ಣಪುಟ್ಟ ಸಾಲ ಮಾಡಿದ್ದಾರೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ನಿಗಮ ಮಂಡಳಿಗಳಲ್ಲಿ ಮಾಡಿರುವ ಸಾಲವನ್ನೂ ವಸೂಲು ಮಾಡಲು ಆದೇಶ ನೀಡಿದೆ. ಇದರಿಂದಾಗಿ ಅಧಿಕಾರಿಗಳು ಫಲಾನುಭವಿಗಳಿಗೆ ಸಾಲ ಮರು ಪಾವತಿಸುವಂತೆ ಕಿರಿಕಿರಿ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಬಡವರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.ಕೊರೋನಾ ಮಹಾಮಾರಿಯಿಂದ ಬಡವರು, ನಿರ್ಗತಿಕರು ಜೀವನ ನಡೆಸುವುದೇ ಕಷ್ಟವಾಗಿದೆ. ಅಲ್ಲದೇ ಸರಿಯಾದ ಉದ್ಯೋಗ ವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದರೆ ಬಡವರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದರಂತೆ ಮುಖ್ಯಮಂತ್ರಿಗಳು ಮಾಡುತ್ತಾರೆ ಎಂಬ ನಂಬಿಕೆ ಇದೆ. ಬಿಜೆಪಿಯವರಿಗೆ ಮುಸ್ಲಿಮರನ್ನು ಕಂಡರೆ ಅಡಿಯಿಂದ ಮುಡಿಯವರೆಗೂ ಉರಿಯುತ್ತದೆ. ಹೀಗಾಗಿ ಬಿಜೆಪಿಯವರಿಂದ ಏನೂ ನಿರೀಕ್ಷೆ ಮಾಡಲು ಆಗುವುದಿಲ್ಲ. ಅದರಲ್ಲು ಕರ್ನಾಟಕ ಮುಸ್ಲಿಂ ಅಭಿವೃದ್ಧಿ ಮಂಡಳಿಯAತು ಸೊರಗಿ ಧೂಳು ಹಿಡಿದು ಮೂಲೆಗೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಪುನಶ್ಚೇತನ ನೀಡಬೇಕು. ಕಾಂಗ್ರೆಸ್ ಸರ್ಕಾರದ ಮೇಲೆ ಮುಸ್ಲಿಂ ಸಮುದಾಯ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕೆಂದು ಮನವಿ ಮಾಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಇಡೀ ರಾಷ್ಟçವೇ ರಾಜ್ಯವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಮನಸ್ಸು ಮಾಡಿದರೆ ಬೊಕ್ಕಸಕ್ಕೆ ಬರುವ ಆದಾಯದಿಂದ ರಾಜ್ಯದ ಜನರನ್ನು ಸಾಕಬಹುದು ಎಂದು ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.