ನಿಗಮ ಮಂಡಳಿಯಿಂದ ಶೋಷಿತರ ಅಭಿವೃದ್ಧಿಯಾಗಲಿ: ಮೆಹಕರ ಶ್ರೀ

ಭಾಲ್ಕಿ:ನ.19: ವೀರಶೈವ ಲಿಂಗಾಯತ ಹಾಗೂ ಮರಾಠಾ ಅಭಿವೃಧ್ಧಿ ನಿಗಮ ಮಂಡಳಿಯ ಮೂಲಕ ಬಡವರ, ಶೋಶಿತರ, ಕಷ್ಟದಲ್ಲಿದ್ದವರನ್ನ ಎತ್ತುವ ಕೆಲಸವಾಗಬೇಕು ಎಂದು ತಡೋಳಾ, ಮೆಹಕರ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ರಾಜೇಶ್ವರ ಶಿವಾಚಾರ್ಯರು ಹೇಳಿದ್ದಾರೆ.

ಈ ಕುರಿತು ಬುಧವಾg ಪ್ರಕಟಣೆ ನೀಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯ್ಯೂರಪ್ಪನವರು ವೀರಶೈವ ಲಿಂಗಾಯತ ಹಾಗೂ ಮರಾಠಾ ಅಭಿವೃಧ್ಧಿ ನಿಗಮ ಮಂಡಳಿ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ, ಅವರಿಗೆ ಬಡವರ ಹಾಗೂ ಅಸಹಾಯಕರ ಬಗ್ಗೆ ಕಾಳಜಿ ವಹಿಸುವ ಮನೋಭಾಕ್ಕೆ ಸ್ವಾಗತ. ಈ ನಿಗಮ ಮಂಡಳಿ ಸ್ಥಾಪಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ನಿಗಮ ಮಂಡಳಿಯ ಮೂಲಕ ಸಮಾಜದಲ್ಲಿಯ ಬಡವರ, ಶೋಷಿತರ, ಕಷ್ಟದಲ್ಲಿರುವವರ ಅಭಿವೃದ್ಧಿ ಪಡಿಸುವ ಕಾರ್ಯವಾಗಬೇಕು. ಆ ಸಮಾಜದಲ್ಲಿನ ಬಡರೇಖೆಗಿಂತ ಕೆಳಮಟ್ಟದ ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೌಕರ್ಯಗಳನ್ನು ಸರಕಾರ ನೀಡಿ ಅಂಥವರ ಸರ್ವತೋಮುಖ ಅಭಿವೃಧ್ಧಿ ಆಗಬೇಕು, ಅಂದಾಗ ಮಾತ್ರ ನಿಗಮ ಮಂಡಳಿ ಸ್ಥಾಪನೆಗೆ ಬೆಲೆ ಬರುತ್ತದೆ ಎಂದು ತಿಳಿಸಿದ್ದಾರೆ.