ನಿಗಮದಿಂದ ಹೊಸದಾಗಿ ವೇಗದೂತ ಬಸ್‍ಗಳ ಕಾರ್ಯಾಚರಣೆ

ಕಲಬುರಗಿ,ಆ.4:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ಘಟಕ-2 ದಿಂದ ಕಲಬುರಗಿ-ಬಾಗಲಕೋಟ, ಕಲಬುರಗಿ-ವಿಜಯಪುರ-ಬೀದರ ಹಾಗೂ ಕಲಬುರಗಿ-ಯಡ್ರಾಮಿ-ವಿಜಯಪುರ ಮಾರ್ಗಗಳ ಮಧ್ಯದಲ್ಲಿ ಹೊಸದಾಗಿ ವೇಗದೂತ ವಾಹನಗಳನ್ನು ಈಗಾಗಲೇ ಜುಲೈ 25 ರಿಂದ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.