ನಿಗಧಿತ ಸ್ಥಳದಲ್ಲಿ ಬಸ್ ನಿಲ್ಲಿಸಲು ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,29- ಸಾರಿಗೆ ಸಂಸ್ಥೆಯ ಬಸ್ ಗಳನ್ನು ನಗರದಲ್ಲಿ ನಿಗಧಿತ ಸ್ಥಳದಲ್ಲಿಯೇ ನಿಲ್ಲಿಸಲು ಸೂಚನೆ ನೀಡಲು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಡಿಸಿಯವರಿಗೆ ಅಂದ್ರಾಳ್ ಸೇವಾ ಸಮಿತಿ ನಿನ್ನೆ ಮನವಿ ಮಾಡಿದೆ.
ಸಮಿತಿಯ ಅಧ್ಯಕ್ಷ ಆರ್. ವೆಂಕಟರೆಡ್ಡಿ, ಪಾಲಿಕೆ ಸದಸ್ಯ ರಾಮಾಂಜನೇಯಲು ಮೊದಲಾದವರು ಮನವಿ ನೀಡಿ. ಗಡಿಗಿ ಚೆನ್ನಪ್ಪ ವೃತ್ತದ ಬಳಿ ಬೇರೆ ಊರುಗಳಿಂದ ಬಂದ ಬಸ್ ಗಳು‌ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಲಾಗುತ್ತಿದೆ. ಪ್ರಯಾಣಿಕರು ಇಳಿಯಲು ನಿಗಧಿಪಡಿಸಿದ ಸ್ಥಳದಲ್ಲಿ ನಿಲ್ಲಿಸಲ್ಲ. ಅದೇರೀತಿ ಗವಿಯಪ್ಪ ಸರ್ಕಲ್ ನಲ್ಲೂ ಸಹ ಅದಕ್ಕಾಗಿ ಚಾಲಕರಿಗೆ ಬಸ್ ಪ್ರಯಾಣಿಕರ ತಂಗುದಾಣಗಳು ಇರುವ ಕಡೆ ಮಾತ್ರ ನಿಲ್ಲಿಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ನಂತರ ಎಸ್ಪಿ ಸೈದುಲ ಅಡಾವತ್ ಅವರಿಗೂ ಮನವಿ ಸಲ್ಲಿಸಿ, ಅಂದ್ರಾಳ್ ನಲ್ಲಿ ಪೊಲೀಸ್ ಔಟ್ ಪೋಸ್ಟ್ ತೆರೆಯಲು, ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವ  ಬಗ್ಗೆ  ಮನವಿ ಸಲ್ಲಿಸಲಾಗಿದೆ.

Attachments area