ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ

ಸೇಡಂ,ಎ,18: ಪಟ್ಟಣ ಹಾಗೂ ಮುಧೋಳ, ಮಳಖೇಡ,ಆಡಕಿ, ಹಾಗೂ ಅನೇಕ ಗ್ರಾಮದಲ್ಲಿ ಅನವಶ್ಯಕವಾಗಿ ಕಿರಾಣಿ ಸಾಮಾನುಗಳು ಹಾಗೂ ಪಾನ್ ಮಸಾಲಾ,ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆಗಳನ್ನು ನಿಗದಿಪಡಿಸಿದ ಬೆಲೆಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ, ಕಾರಣ ಕೇಳಿದರೆ ಅನ್ಯ ರಾಜ್ಯಗಳ ಲಾಕ್ ಡೌನ್ ದಿಂದ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ ಅದರೇ ಅವರ ಗೋಡೌನಗಳಲ್ಲಿ ಕಿರಾಣಿ ಮತ್ತು ತಂಬಾಕು ಉತ್ಪನ್ನಗಳನ್ನು ಅವಶ್ಯಕತೆ ಗಿಂತ ಹೆಚ್ಚು ಶೇಖರಣೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಜನಸಾಮಾನ್ಯರಿಗೆ ಸರಿಯಾದ ರೀತಿಯಲ್ಲಿ ಸೂಕ್ತವಾದ ಬೆಲೆಗೆ ಸಾಮಾನುಗಳನ್ನು ಸಿಗುವಂತೆ ಮಾಡಬೇಕೆಂದು ಪಂಡರಿನಾಥ ಬಸುದೆ ಒತ್ತಾಯಿಸಿದ್ದಾರೆ.