ನಿಗದಿತ ಸಮಯದಲ್ಲೇ ವ್ಯಾಪಾರ ವಹಿವಾಟು ಪೂರೈಕೆಗೆ ಸೂಚನೆ

ಹರಿಹರ.ಮೇ.4;  ಸರ್ಕಾರ ನೀಡಿರುವ ಆದೇಶದನ್ವಯ ನಿಗದಿತ ಸಮಯದಲ್ಲೇ ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಗಿಸಬೇಕು ಇಲ್ಲದಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮಿ .ತಹಸಿಲ್ದಾರ್ ಕೆ ಬಿ ರಾಮಚಂದ್ರಪ್ಪ .ಪಿಎಸ್ಸೈ ಸುನಿಲ್  ಬಸವರಾಜ ತೇಲಿ .ಹೇಳಿದರು ಮುಂಜಾನೆಯಿಂದ ಪೌರಾಯುಕ್ತರು ತಹಸೀಲ್ದಾರ್ ಪಿಎಸ್ ಐ ಸೇರಿದಂತೆ ಡಿಎಆರ್ ಮೈದಾನ ಗಿರಿಯಮ್ಮ ಕಾಲೇಜಿನ ರಸ್ತೆ ತರಕಾರಿ ಮಾರುಕಟ್ಟೆ ಮಹಾತ್ಮಗಾಂಧಿ ಕ್ರೀಡಾಂಗಣ ಮೈದಾನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವ್ಯಾಪಾರ ವಹಿವಾಟ ಮಾಡುವಂತವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರುಹೋಲ್ ಸೇಲ್ ತರಕಾರಿ ಮಾರುವವರಿಗೆ ಬೆಳಿಗ್ಗೆ 6ರಿಂದ 8ರವರೆಗೆ  ಸಮಯ ಅವಕಾಶ ನೀಡಿದೆ ಮತ್ತು ನಂತರ ತಳ್ಳುವ ಗಾಡಿಗಳಲ್ಲಿ ಬೆಳಿಗ್ಗೆ ಆರರಿಂದ ಸಂಜೆ 6ಗಂಟೆಯವರೆಗೂ ವ್ಯಾಪಾರ ವಹಿವಾಟುಗಳನ್ನು ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಿದೆ ಮತ್ತು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆವರೆಗೂ ವ್ಯಾಪಾರ ಮಾಡುವುದಕ್ಕೆ ಸಮಯವನ್ನೂ ನಿಗದಿ ಮಾಡಿದರು ಅದನ್ನು ಮೀರಿ ವ್ಯಾಪಾರ ವಹಿವಾಟು ಮಾಡುವವರು ಸಾರ್ವಜನಿಕರು ಗುಂಪು ಗುಂಪಾಗಿ ನಿಲ್ಲುವುದು ಸಾಮಾಜಿಕ ಅಂತರವನ್ನು ಕಾಪಾಡದೆ ನಿರ್ಲಕ್ಷ ವಹಿಸುತ್ತಿರುವದು ಕೋವಿಡ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವವರ ಮೇಲೆ ಮುಲಾಜಿಲ್ಲದೆ ಕೇಸನ್ನು ದಾಖಲು ಮಾಡಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ  ನಗರಸಭೆ ಕಂದಾಯ ಪೊಲೀಸ್  ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು