ನಿಗದಿತ ಸಮಯಕ್ಕೆ ಮಾಹಿತಿ ನೀಡಲು ಎಡಿಸಿ ಸೂಚನೆ

ರಾಯಚೂರು, ಮಾ.೨೫- ಜಿಲ್ಲೆಯಲ್ಲಿ ಸ್ಮಶಾನ ಭೂಮಿ ಗಳ ಬಗ್ಗೆ ತಾಲೂಕುವಾರು ನಿಗದಿತ ಸಮಯಕ್ಕೆ ಮಾಹಿತಿಯನ್ನು ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ದುರ್ಗೇಶ್ ತಹಸಿಲ್ದಾರ್ ರಿಗೆ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಮಶಾನ ಜಾಗ ಒತ್ತುವರಿ ಯಾಗಿದ್ದ ಮಾಹಿತಿ ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಮಶಾನ ಜಾಗದಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು. ಎಲ್. ಬಿ ಎಸ್, ಬಡಾವಣೆಯ ಮೂರ್ತ ಗೋವಿಂದ ಹಾಗೂ ಮಹೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು ಮಾಡುವ ಕುರಿತು ಕಾನೂನು ಸಲಹೆಗಾರ ಸಲಹೆಯನ್ನು ಪಡೆದು ಕ್ರಮ ಜರುಗಿಸಬೇಕೆಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ. ಪಂಚನಾಮೆಯ ವರದಿಯಲ್ಲಿ ಮೃತನ ತಾಯಿ ಪರಿಹಾರಧನವನ್ನು ಮೃತನ ತಾಯಿ ಮತ್ತು ತಂದೆಗೆ ಸಮಭಾಗವಾಗಿ ವಿತರಿಸಲು ಕೋರಿದ್ದು ಮೃತನ ತಂದೆ ಪರಿಹಾರಧನ ಸಮ ಭಾಗವಾಗಿಸಲು ತಕರಾರು ಸಲ್ಲಿಸಿದ್ದಾರೆ ಎಂದರು.ಪರಿಹಾರಧನ ಮೃತನ ಇಬ್ಬರು ಪತ್ನಿಯರಿಗೆ ಸಮಭಾಗವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಹೆಸರು ೨೦ ೨೧ ನೇ ಸಾಲಿನಲ್ಲಿ ಭೋಜನದಲ್ಲಿ ನೊಂದ ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು ಮಾಡಲು ಕೇಂದ್ರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ರೂ.೯೦.೦೦ ಲಕ್ಷ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ೩೬ ಪ್ರಕಾರಗಳಿಗೆ ಸದರಿ ಅನುದಾನವನ್ನು ಖರ್ಚು ಮಾಡಿ ಪರಿಹಾರ ಧನ ಬಿಡುಗಡೆ ಮಾಡಿದ್ದು. ಬಾಕಿ ೪೮ ಪ್ರಕಾರಗಳಿಗೆ ಮಂಜೂರಾತಿ ಆದೇಶವಾಗಿದ್ದು ಅನುದಾನ ಬಿಡುಗಡೆ ಮಾಡಲು ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
೨೦೨೦-೨೧ ನೆ ಸಾಲಿನ ೮೫.೦೦ ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು ಬಾಕಿ ಇರುವ ೪೮ ಪ್ರಕರಣಗಳ ಪೈಕಿ ೨೫ ಪ್ರಕಾರಗಳಲ್ಲಿ ೧೧೨ ಸಂತ್ರಸ್ತರಿಗೆ ಪರಿಹಾರ ಮಂಜೂರು ಮಾಡಲಾಗಿದೆ.೮೫. ಲಕ್ಷ ಖರ್ಚು ಭರಿಸಲಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ೭೫ ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಂತೋಷ್ ಕಮಗೌಡ,ಎಸ್ಪಿ ಸೇರಿದಂತೆ ಅಧಿಕಾರಿಗಳು ಇದ್ದರು