ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

ಶಹಾಪುರ:ಡಿ.8:ತಾಲೂಕಿನ ಹೋತಪೇಟ ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬಸ್ ತಲುಪದ ಕಾರಣ ವಿಧ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸರಿಯಾಗಿ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯುಂಟಾಗುತ್ತಿದ್ದು ಕೂಡಲೇ ಬಸ್ ಸಂಪರ್ಕ ಕಲ್ಪಿಸಬೇಕೆಂದು ವಿಧ್ಯಾರ್ಥಿಗಳು ಮತ್ತು ಕರವೇ ಸಂಘಟನೆಯ ವತಿಯಿಂದ ಶಹಾಪುರ ಬಸ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಕರವೇ ತಾಲೂಕು ಅಧ್ಯಕ್ಷ ಭೀಮಣ್ಣ ಶಖಾಪುರ ಮಾತನಾಡಿ, ಗ್ರಾಮೀಣ ಭಾಗದ ಕೆಲವು ಹಳ್ಳಿಗಳಿಗೆ ಇನ್ನು ಬಸ್ ಸಂಪರ್ಕ ಸಮರ್ಪಕವಾಗಿಲ್ಲ. ಹೋತಪೇಟ ಗ್ರಾಮಕ್ಕೂ ನಿಗದಿತ ಬಸ ಬರದ ಕಾರಣ ವಿಧ್ಯಾರ್ಥಿಗಳ ಶಾಲಾ ಕಾಲೇಜಿಗೆ ತೆರಳಲು ಸಮಸ್ಯೆಯಾಗುತ್ತಿದ್ದು ಕೂಡಲೇ ಸಮಸ್ಯೆಗೆ ಪರಿಹಾರ ವದಗಿಸಿ ಬಸ್ ಸಂಪರ್ಕ ಕಲ್ಪಿಸಬೇಕು ವಿಳಂಬ ಮಾಡಿದರೆ ಬಸ್ ಡಿಪೋ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು..

ಇದೇ ಸಂದರ್ಭದಲ್ಲಿ ಕರವೇ ಯುವ ಘಟಕ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ, ಹೋತಪೇಟ್ ಗ್ರಾಮ ಘಟಕದ ಅಧ್ಯಕ್ಷ ರಾಯಣ್ಣ ರವಿ ಯಾದವ್, ಬಾಬು ಗವಾರ್, ಮನ್ಸೂರ್ ಮುಕ್ತಪೂರ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು