ನಿಗದಿಗಿಂತ ಅಧಿಕ ಮದ್ಯ ಸಂಗ್ರಹ; ಪ್ರಕರಣ ದಾಖಲು

ಹೊಸನಗರ.ಜೂ.೩: ಖಚಿತ ಮಾಹಿತಿ ಮೇರೆಗೆ ಬುಧವಾರ ತಾಲೂಕಿನ ಸಂತೆಹಕ್ಲು-ಮಲ್ಲಾಪುರ ಗ್ರಾಮದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿದ ತೀರ್ಥಹಳ್ಳಿ ಅಬಕಾರಿ ಪೊಲೀಸರು, ಸಂಗ್ರಹಿಸಿಟ್ಟಿದ್ದ ಅಕ್ರಮ ಮದ್ಯ ವಶಕ್ಕೆ ಪಡೆದ ಪ್ರಕರಣ ದಾಖಲಿಸಿದ್ದಾರೆ.ಸಂತೆಹಕ್ಲು-ಮಲ್ಲಾಪುರ ಗ್ರಾಮದ ವೆಂಕಟೇಶ್ ಬಿನ್ ಭೈರಪ್ಪ ಎಂಬುವವರ ಮನೆ ಮೇಲೆ ದಾಳಿ ನೆಡೆಸಿ ಶೋಧಿಸಿದಾಗ ಇಲಾಖೆ ನಿಗದಿ ಪಡಿಸಿರುವ ಪ್ರಮಾಣಕ್ಕಿಂತ ಅಧಿಕವಾದ 11.52 ಲೀಟರ್ ನಷ್ಟು ಭಾರತೀಯ ತಯಾರಿಕ ಮದ್ಯ ಮನೆಯಲ್ಲಿ ದೊರೆತಿದೆ. ಆರೋಪಿ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ 1965ರಡಿಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಸೂಚನೆ ಮೇರೆಗೆ, ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಕುಮಾರ್ ಹಾಗೂ ಎಲ್. ತಿಪ್ಪಣ್ಣನವರ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಎಸ್.ಎಂ.ಅಮಿತ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಶಕೀಲ್, ರಾಘವೇಂದ್ರ, ಮಲ್ಲಿಕ್, ಚಾಲಕ ಕಿರಣ್ ದಾಳಿ ಮಾಡಿದ್ದರು.