ನಿಖರ ಸರ್ವೆ ನಡೆಸಿದ ಶೈನಿಂಗ್ ಸರ್ವೆ ಇಂಡಿಯ ಸಾಧನೆ

ಬೆಂಗಳೂರು, ಜೂ. ೫-ಲೋಕಸಭಾ ಚುನಾವಣೆ ಸಮೀಕ್ಷೆ ಮತದಾರರ ಮನದಾಳದ ಮಾತನ್ನು ಮತದಾರರಿಗೆ ತಿಳಿಸಿದ ಇಂಡಿಯಾ.
ಸರ್ವೆ ಇಂಡಿಯ ೧೮ನೇ ಲೋಕಸಭಾ ಚುನಾವಣೆಯಲ್ಲಿ ಏಪ್ರಿಲ್ ನಿಂದ ಆರಂಭವಾಗಿದೆ ಜೂನ್ ೧ಮುಕ್ತಾಯವಾಯಿತು.
ಶೈನಿಂಗ್ ಇಂಡಿಯ ಸರ್ವೆ ಇಂಡಿಯ ಸಂಸ್ಥೆಯವರು ಲೋಕಸಭಾ ಚುನಾವಣೆ ಎರಡು ತಿಂಗಳ ಮುಂಚೆ ಪ್ರತಿ ರಾಜ್ಯಗಳಲ್ಲಿ ಲಕ್ಷಾಂತರ ಜನರ ಸರ್ವೆ ಮಾಡಿದರು.
ಮತದಾರರು ಯಾವ ಪಕ್ಷ ಮತ ಹಾಕುತ್ತಿರ ಮತ್ತು ಯಾಕೆ ಮತ ಕೊಡುತ್ತಿದ್ದಿರ ಎಂಬ ಹಲವಾರು ಪ್ರಶ್ನೆಗಳನ್ನು ಮತದಾರರ ಬಳಿ ನಿಖರವಾಗಿ ಸಂಗ್ರಹ ಮಾಡಲಾಯಿತು.
೧೮ನೇ ಲೋಕಸಭಾ ಚುನಾವಣೆಯಲ್ಲಿ ಶೈನಿಂಗ್ ಇಂಡಿಯ ಸರ್ವೆ ನಡೆಸಿದ ಸಂದರ್ಭದಲ್ಲಿ ಮತದಾರರು ಕೊಟ್ಟ ಮಾಹಿತಿಯನ್ನು ಈ ಮುಂಚೆ ಪ್ರಕಟಣೆ ಮಾಡಲಾಗಿತ್ತು.
ಬಿಜೆಪಿ ಎನ್.ಡಿ.ಎ. ೨೫೩ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮತ್ತು ಇಂಡಿಯ ಮೈತ್ರಿಕೂಟ ೧೮೬ಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ವರದಿ ಪ್ರಕಟಣೆ ಮಾಡಲಾಯಿತು.
ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ ಬಿಜೆಪಿ ಎನ್.ಡಿ.ಎ. ಮೈತ್ರಿಕೂಟ ೨೯೫ ಮತ್ತು ಕಾಂಗ್ರೆಸ್ ಇಂಡಿಯ ಮೈತ್ರಿಕೂಟ ೨೨೯ಸ್ಥಾನಗಳು ಗಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ,ಜೆಡಿಎಸ್ ಮೈತ್ರಿಕೂಟ ೧೬ಸ್ಥಾನ ಗೆಲ್ಲಲಿದೆ ಕಾಂಗ್ರೆಸ್ ಪಕ್ಷ ೯ ರಿಂದ ೧೨ ಗೆಲ್ಲಲಿದೆ ಎಂದು ಶೈಲಿಂಗ್ ಸರ್ವೆ ಇಂಡಿಯ ಸಮೀಕ್ಷೆ ವರದಿ ಪ್ರಕಟಣೆ ಮಾಡಿತ್ತು.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟ ೧೯ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷ ೯ಸ್ಥಾನ ಗಳಿಸಿದೆ.
ಶೈನಿಂಗ್ ಇಂಡಿಯ ಸರ್ವೆ ಕಳೆದ ಲೋಕಸಭಾ ಮತ್ತು ಹಲವಾರು ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆಗಳು ನಿಖರವಾಗಿ ನೀಡಿದೆ ಮತ್ತು ಈ ಬಾರಿಯು ಸಹ ಲೋಕಸಭಾ ಚುನಾವಣೆ ಸಮೀಕ್ಷೆಯನ್ನು ನಿಖರವಾಗಿ ನೀಡಿರುವುದು ಸಾಧನೆಯಾಗಿದೆ ಎಂದು ಶೈನಿಂಗ್ ಸರ್ವೆ ಇಂಡಿಯದ ಸಂಸ್ಥಾಪಕ ಹೃತಿಕ್ ಶೈನಿಂಗ್ ರವರು ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.