“ನಿಕ್ಷಯ್ ದಿವಸ್” ಕುರಿತು ಜಾಗೃತಿ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು:ಏ:18:  “ನಿಕ್ಷಯ್ ದಿವಸ್” ಕುರಿತು ಜಾಗೃತಿ ಕಾರ್ಯಕ್ರಮ ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಿ.ಆರ್ ಕ್ಯಾಂಪಿನಲ್ಲಿ ಗುಂಪು ಸಭೆಗಳ ಮೂಲಕ “ನಿಕ್ಷಯ್ ದಿವಸ್” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,
ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರತಿ ತಿಂಗಳು ಹದಿನೈರಂದು ಕ್ಷಯರೋಗ ನಿರ್ಮೂಲನೆ ಮಾಡಲು ಜಾಗೃತಿಯನ್ನು ಮೂಡಿಸಲಾಗುತ್ತಿದೆ, 2025 ಕ್ಕೆ ಕ್ಷಯರೋಗ ಮುಕ್ತ ರಾಷ್ಟ್ರ ರೂಪಿಸಲು ಎಲ್ಲರೂ ಕೈ ಜೋಡಿಸ ಬೇಕಿದೆ, ಕಾರ್ಖಾನೆಯ ಕೆಲಸಕ್ಕೆ ಹೋಗುವವರು,ತಂಬಾಕು,ಬೀಡಿ,ಸಿಗರೇಟು, ಗುಟಕಾ,ಹಾನ್ಸ್,ಹೀರಾ,ಪಾನ್ ಪರಾಕ್ ಹಾಕುವವರು, ಮದ್ಯಪಾನ, ಮತ್ತು ಆರೋಗ್ಯದ ಅಪಾಯದ ಅಂಚಿನಲ್ಲಿರುವವರು ಅಥವಾ ಯಾರಿಗಾದರೂ ಎರಡು ವಾರದ ಕೆಮ್ಮ,ಜ್ವರ,ಹಸಿವೆ ಇಲ್ಲದಿರುವವರು, ತೂಕ ಕಡಿಮೆಯಾಗುತ್ತಿರುವವರು, ಕೆಮ್ಮಿದಾಗ ಕಫ, ಕಫದಲ್ಲಿ ರಕ್ತ ಬೀಳುವುದು ಇದ್ದರೆ ಈ ಲಕ್ಷಣಗಳು ಇದ್ದರೆ ಅದು ಕ್ಷಯರೋಗ ಆಗಿರ ಬಹುದು ಅಂತಹವರು ಹತ್ತಿರದ ಆಸ್ಪತ್ರೆಯಲ್ಲಿ ತಪಾಸಣೆ ಒಳಗಾಗ ಬೇಕು,ದೃಢಪಟ್ಟರೆ ಆರು ತಿಂಗಳ ಪೂರ್ಣ ಚಿಕಿತ್ಸೆ ಪಡೆಯಬೇಕು, ಪೌಷ್ಟಿಕಾಹಾರ ಸೇವಿಸಬೇಕು, ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು,ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ ಕ್ಷಯರೋಗ ಮುಕ್ತ ರಾಷ್ಟ್ರ ರೂಪಸಿ ಎಂದು ಕರೆ ನೀಡಿದರು,
 ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆ ಹುಲಿಗೆಮ್ಮ,ವಿಜಯ ಶಾಂತಿ, ಆಶಾ,ರಾಜೇಶ್ವರಿ, ಗ್ರಾಮಸ್ಥರಾದ ಹುಸೇನ್ ಸಾಬ್,ಮಹೇಶ್,ಬೀಮಲಿಂಗ, ಕಸ್ತೂರಿ, ಅಖಿಲಾ, ರಮ್ಯಾ,ರಾಧ,ಸುಮಂಗಳಾ,ಹನುಮಕ್ಕ,ಕವಿತಾ, ಅಸ್ಮಾ,ಸ್ವಾತಿ, ಅಂಕಿತಾ, ಉಷಾ, ಇತರರು ಹಾಜರಿದ್ದರು