ನಿಕಟ ಸಂಪರ್ಕ ಕಂಪನಿಗಳು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಲಿ: ಶ್ರೀಕಾಂತ

ಬ್ಯಾಡಗಿ,ಜ 12- ಹಿಂದುಳಿದ ಪ್ರದೇಶದ ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯದ ನಿಕಟ ಸಂಪರ್ಕದಲ್ಲಿರುವ ಕಂಪನಿಗಳು ಸಹಾಯ ಹಸ್ತ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಡ್ವಾಂಟಾ ಸೀಡ್ಸ ಕಂಪನಿಯ ವ್ಯವಸ್ಥಾಪಕ ಶ್ರೀಕಾಂತ ಹೇಳಿದರು.
ತಾಲೂಕಿನ ಅತ್ತಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಡ್ವಾಂಟಾ ಸೀಡ್ಸ್ ಕಂಪನಿಯ ವತಿಯಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್ ಹಾಗೂ ಪೆÇ್ರೀಜೆಕ್ಟರ್’ಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕಂಪ್ಯೂಟರ ಜ್ಞಾನ ಅತೀ ಅವಶ್ಯವಾಗಿದ್ದು, ಮಕ್ಕಳ ಕಲಿಕೆ ಶಾಶ್ವತವಾಗಿರಲು ಆಲಿಸುವಿಕೆಯ ಜೊತೆಗೆ ದೃಶ್ಯ ಮಾಧ್ಯಮವೂ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೆÇ್ರಜೆಕ್ಟರ್ ಮೂಲಕ ಆಯಾ ವಿಷಯದ ಪರಿಕಲ್ಪನೆಗಳನ್ನು ವಿಡಿಯೋದ ಮೂಲಕವಾಗಿ ತಿಳಿಸಿದಾಗ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಲು ಸಹಕಾರಿಯಾಗುತ್ತದೆ ಎಂದರು.
ರಾಣೇಬೆನ್ನೂರ ವಲಯದ ವ್ಯವಸ್ಥಾಪಕ ಗೌಡಪ್ಪನವರ ಮಾತನಾಡಿ, ಅಡ್ವಾಂಟಾ ಸೀಡ್ಸ್ ಕಂಪನಿಯು ಕೇವಲ ಲಾಭ ಗಳಿಸುವುದಕಷ್ಟೇ ಮೀಸಲಾಗಿಲ್ಲ, ತನ್ನ ಆದಾಯದ ಸ್ವಲ್ಪ ಭಾಗವನ್ನು ಸಮಾಜದಲ್ಲಿರುವ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವ್ಯಯಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಾದ್ಯಂತ ಕಂಪನಿಯ ವತಿಯಿಂದ ಸುಮಾರು 74 ಕೋಟಿಗಳಷ್ಟು ಹಣವನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತಗಳ ಸಹಭಾಗಿತ್ವದಲ್ಲಿ ಜನಹಿತ ಕಾರ್ಯಕ್ಕಾಗಿ ವ್ಯಯಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಚನ್ನವೀರಪ್ಪ ಕೋಡಿಹಳ್ಳಿ, ಸೂಡಂಬಿ ಕ್ಲಸ್ಟರ್ ಸಿಆರ್’ಪಿ ಹನುಮರೆಡ್ಡಿ ಶಿಡಗನಾಳ, ಶಿಕ್ಷಣ ಪ್ರೇಮಿಗಳಾದ ಚಂದ್ರಪ್ಪ ಕುಲಮಿ, ಮಲ್ಲಪ್ಪ ಚಿಕ್ಕಳ್ಳಿ, ಶಿವಪುತ್ರಯ್ಯ ಹಿರೇಮಠ, ಎಸ್’ಡಿಎಂಸಿ ಅಧ್ಯಕ್ಷ ಉಜ್ಜಯ್ಯ ಕರಿನಾಗಣ್ಣನವರ, ಉಪಾಧ್ಯಕ್ಷೆ ಜ್ಯೋತಿ ಬಿಳಕಿ, ಆಂಜನೇಯ ಗಿರೇಗೊಂಡ್ರ, ದೇವೆಂದ್ರಪ್ಪ ಕ್ಯಾಲೂರ, ಸಂಜೀವ ಮಾಳಾಪುರ, ಕರಬಸಪ್ಪ ಕಲಕೇರಿ, ಮನೋಹರ ಕರಿನಾಗಣ್ಣನವರ, ಖಾದರ ದಿವಾನವರ, ಪರಮೇಶ ಕರಿನಾಗಣ್ಣನವರ, ಉಪಸ್ಥಿತರಿದ್ದರು.
ಜಮೀರ್ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್. ಕೊಟ್ರಳ್ಳಿ ಸ್ವಾಗತಿಸಿದರು. ಎಚ್.ಮಹೇಶ ಕಾರ್ಯಕ್ರಮವನ್ನು ನಿರೂಪಿಸಿದರು. ಎಂ.ಈಶಪ್ಪ ವಂದಿಸಿದರು.