ನಿಕಟಪೂರ್ವ ಜಿಲ್ಲಾಧಿಕಾರಿಗೆ ಪ್ರಶಸ್ತಿ

ಕೋಲಾರ,ಜ,೨೭- ಕಳೆದ ವಿಧಾನಸಭಾ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಭಾರತ ಚುನಾವಣಾ ಆಯೋಗವು ಪ್ರಶಸ್ತಿಗಳನ್ನು ಘೋಷಿಸಿದೆ.
ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ವಿಭಾಗದಲ್ಲಿ ಕೋಲಾರ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ವೆಂಕಟ್‌ರಾಜಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತ ಸರ್ಕಾರದ ಚುನಾವಣಾ ಆಯೋಗವು ನಿಗಧಿ ಪಡೆಸಿದ್ದ ಹಲವು ಮಾನದಂಡಗಳಲ್ಲಿ ಬಹುತೇಕ ಚಟುವಟಿಕೆಗಳಲ್ಲಿ ನಿಗಧಿತ ಗುರಿಯನ್ನು ಸಾಧಿಸಿ ಈ ಪ್ರಶಸ್ತಿಗೆ ಭಜನರಾಗಿದ್ದಾರೆ.
ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ, ಇ.ವಿ.ಎಂ.ಗಳ ಕುರಿತು ಮತದಾರರಿಗೆ ಅರಿವು, ಸ್ವೀಪ್ ಚಟುವಟಿಕೆಗಳು ಪ್ರಚಾರಾಂದೋಲನಗಳು. ವಿಶೇಷ್ಟ ಮತಗಟ್ಟಿಗಳ ಮೂಲಕ ಸೆಳೆಯುವುದು ಸೇರುದಂತೆ ಅಚ್ಚುಕಟ್ಟಾದ ಚುನಾವಣೆ ನಿರ್ವಹಣೆ, ಅತಿ ಹೆಚ್ಚು ಮತದಾನ ಸೇರಿದಂತೆ ಹಲವಾರು ಮಾನದಂಡಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಕ್ಕಾಗಿ ಅವರಿಗೆ ಅತ್ಯುತ್ತಮವಾದ ಚುನಾವಣಾಧಿಕಾರಿಯಾಗಿ ಗುರುತಿಸಿ ಕೊಂಡು ಈ ಪ್ರಶಸ್ತಿಗೆ ಭಜನರಾದರು,
ಕೋಲಾರ ಜಿಲ್ಲೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಅತ್ಯುತ್ತಮ ಚುನಾವಣಾ ಸಾಕ್ಷರತ ಕ್ಲಬ್, ಪ್ರಶಸ್ತಿ ಲಭಿಸಿದೆ. ಭಾರತ ಚುನಾವಣಾ ಆಯೋಗ ಶಿಕ್ಷಣ ಇಲಾಖೆ ಜತೆಗೊಡಿ ವಿದ್ಯಾರ್ಥಿಗಳಿಗೆ ಚುನಾವಣಾ ಅರಿವು ಮೂಡಿಸಲು ಸ್ವರ್ಧೆಗಳನ್ನು ಹಮ್ಮಿಕೊಂಡಿತ್ತು ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರಾತ ಕ್ಲಬ್ ರಚನೆ ಮಾಡಲಾಗಿತ್ತು, ರಾಜ್ಯದ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಫ್ರೌಡಶಾಲೆಗಳು ಪದವಿ ಪೂರ್ವ ಕಾಲೇಜು,ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಚುನಾವಣ ಸಂಬಂಧ ಚಿತ್ರಪಟ ಹಾಗೂ ಕೋಲಾಜ್ ಸಿದ್ದಪಡೆಸುವ ಮತ್ತು ಪ್ರಬಂಧ ಸ್ವರ್ಧೆ ನಡೆಸಲಾಗಿತ್ತು,
ಈ ಸ್ವರ್ಧೆಗಳಲ್ಲಿ ಯುವ ಮತದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದು ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಯಶಸ್ವಿಗೊಳಿಸುವ ಮೂಲಕ ಕಾಲೇಜಿಗೆ ಪ್ರಶಸ್ತಿ ಲಭಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಇ.ಎಲ್.ಸಿ ಸಂಯೋಜಕಿ ಡಾ.ಚೈತ್ರ ಅವರಿಗೆ ಕಾಲೇಜಿನ ಪರವಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
ಇಂದು (ಜ೨೫) ಬೆಂಗಳೂರಿನಲ್ಲಿ ನಡೆದ ಮತದಾರರ ದಿನಾಚರಣೆ ೨೦೨೪ರ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.