ನಿಂಬಾಳ ; ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ

ಆಳಂದ:ಎ.18: ತಾಲೂಕಿನ ನಿಂಬಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಚಲಗೇರಾ ಖೇಡ ಉಮ್ಮರ್ಗಾ ನಿಂಬಾಳದಲ್ಲಿ ಪಂಚಾಯಿತ ಸಿಬ್ಬಂದಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪುನಃ ಶಾಲೆಗೆ ಸೇರಿಸುವ ಕುರಿತು ಸಮೀಕ್ಷಾ ಕಾರ್ಯ ಮಾಡಲಾಗುತ್ತಿದೆ. ಈ ಕುರಿತು ಮಾತನಾಡಿದ ಸಮೀಕ್ಷಾ ಕಾರ್ಯದಲ್ಲಿ ಸಿಬ್ಬಂದಿ ರವಿಕುಮಾರ ಮಾಳಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 6ರಿಂದ 14 ವರ್ಷದ ಮಕ್ಕಳು ಯಾವುದೆ ಶಾಲೆಗಳಿಗೆ ದಾಖಲಾಗದೆ ಮತ್ತು ದಾಖಲಾಗಿ ಶಾಲೆಯಿಂದ ಹೊರುಗುಳಿದ ಮಕ್ಕಳನ್ನು ಗುರುತಿಸುವ ಸಮೀಕ್ಷಾ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆಯು 6 ರಿಂದ 14 ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ ಉಚಿತ ಸಮವಸ್ತ್ರ ಪಠ್ಯಪುಸ್ತಕ ಸೈಕಲ್ ಮದ್ಯಾಹ್ನ ಬಿಸಿಯೂಟ ನೀಡುತ್ತಿದೆ. ಆದರೂ ಕೆಲವು ಮಕ್ಕಳು ದಿರ್ಘ ಕಾಲದವರೆಗೆ ಶಾಲೆಯಿಂದ ದೂರ ಉಳಿದು ಗೈರು ಹಾಜರಾಗುತ್ತಿರುವುದು ಕಂಡು ಬರುತ್ತಿದೆ. ಮತ್ತು ಶಾಲೆಯಲ್ಲಿ ದಾಖಲಾತಿ ಹೊಂದಿ ಕಾರಣಾಂತರಗಳಿಂದ ಶಾಲೆ ಬಿಟ್ಟಿರುವುದು ಮತ್ತು ಯಾವುದೆ ಶಾಲೆಗೆ ದಾಖಲಾಗದೆ ಹಾಗೆ ಉಳಿದಿರುವ ಮಕ್ಕಳ ಸಮೀಕ್ಷೆ ಮಾಡಿ ಅಂಥ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಪ್ರತಿಯೊಂದು ಮಗುವು ಶಿಕ್ಷಣದಿಂದ ವಂಚಿತರಾಗದಂತೆ ಮಾಡುವುದು ಶಿಕ್ಷಣ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರ ನೀಡಿದರು. ಸಿಬ್ಬಂದಿಗಳಾದ ಸೇವಂತಿಬಾಯಿ ವಗ್ಗಿ ನಿಂಗಯ್ಯ ಸ್ವಾಮಿ ಲಕ್ಷ್ಮಿಪುತ್ರ ಶೆಟಗಾರ ಬಸವರಾಜ ಇದ್ದರು.