ನಿಂಬರ್ಗಾ ಪ್ರತಿ ಟನ್ ಕಬ್ಬಿಗೆ 3,500 ರೂ.ಬೆಲೆ ನೀಡಿ, ಸಕಾಲಕ್ಕೆ ಹಣ ಪಾವತಿಸಿ

ಆಳಂದ:ನ.12:ಎನ್.ಎಸ್.ಎಲ್ ಭೂಸನೂರ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿಗೆ ನುರಿಸುವ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇಧಿಕೆ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಆಡಳಿತಕ್ಕೆ ಒತ್ತಾಯಿಸಿದರು.

ನಿಂಬರ್ಗಾದ ಉಪ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ರೈತರು ಸಂಕಷ್ಟದಲ್ಲಿ ಕಬ್ಬು ಬೆಳೆದ ರೈತರಿಗೆ ಕಬ್ಬು ನುರಿಸುವ ಮೊದಲೇ ಬೆಲೆ ಘೋಷಿಸಿ ಅದರಂತೆ ಸಕಾಲಕ್ಕೆ ಪಾವತಿಸಬೇಕು. ಈಗಾಗಲೇ ಕಾರ್ಖಾನೆ ಆರಂಭಿಸಿ ಕಬ್ಬು ನುರಿಸಲಾಗುತ್ತಿದೆ. ಆದರೆ ಇದುವರೆಗೂ ಬೆಲೆ ನೀಡುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸದೇ ಇರೋದು ರೈತರಲ್ಲಿ ಗೋಂದಲ ಉಂಟು ಮಾಡಿದೆ. ಈ ಕೂಡಲೇ ಎನ್.ಎಸ್.ಎಲ್ ಆಡಳಿತ ಮಂಡಳಿಯು ಬೆಲೆ ನೀಡುವ ಕುರಿತು ಘೋಷಣೆ ಮಾಡಬೇಕು. ಪ್ರತಿ ಟನ್ ಕಬ್ಬಿಗೆ 3,500 ರೂ.ಬೆಲೆ ನೀಡಬೇಕು ಹಾಗೂ ಪ್ರತಿಟನ್ ಕಬ್ಬಿಗೆ 1 ಕೆಜಿ ಯಂತೆ ರಿಯಾಯಿತಿ ದರದಲ್ಲಿ ರೈತರಿಗೆ ಸಕ್ಕರೆ ಕೊಡಬೇಕು, ಕಟಾವಿಗೆ ಬಂದ ಕಬ್ಬು ಸಮಯಕ್ಕೆ ಕಟಾವು ಕೈಗೋಳ್ಳಬೇಕು. ಕಾರ್ಖಾನೆಗೆ ಕಬ್ಬು ಸಾಗಿಸಿ ತೂಕವಾದ ಮೇಲೆ ಸಕಾಲಕ್ಕೆ ಹಣ ಪಾವತಿಸಬೇಕು.ಆಡಳಿತ ಮಂಡಳಿಯವರು ರೈತರ ಸಭೆ ಕರೆದು ದರ ನಿಗದಿ ಪಡಿಸಿ ಘೋಷಿಸಬೇಕು.ಸಂಭಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಬಂದು ಈ ಬಗ್ಗೆ ಕ್ರಮ ಕೈಗೋಳ್ಳಬೇಕೆಂದು ಎಂದು ಆಗ್ರಹಿಸಿ ಉಪ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನೆ ಪ್ರಧಾನ .ಕಾರ್ಯದರ್ಶಿ ಮಲ್ಲಿನಾಥ ನಾಟೀಕಾರ,ಶ್ರೀಶೈಲ ನಿಗಶೇಟ್ಟಿ, ಮಹಾದೇವ ಮೀಟೆಕಾರ, ರಮೇಶ ಚಿಂಚೂರ, ಬಾಬು ಪಡಸಾವಳಿ,ಮಲ್ಲಿಕಾರ್ಜುನ ಕೋರೆ,ವೀರಭದ್ರಪ್ಪ ನಂದಿ,ಸಂತೋಷ ಧಂಗಾಪೂರ, ಈರಣ್ಣ ಶರಣ,ಧರ್ಮರಾಯ ವಗ್ಧರ್ಗಿ, ಶಿವು ಕುಂಭಾರ,ಮಡಿವಾಳಪ್ಪ ಮಡಿವಾಳ, ಸಚಿನ ಶೀಲವಂತ, ಅನೀಲ ಮಠಪತಿ, ಪ್ರವೀಣ ಮೀಟೆಕಾರ, ಮಲ್ಲಿನಾಥ ಮಾ.ಪಾಟೀಲ್, ಕ್ಷೇಮಲಿಂಗ ಕಂಭಾರ,ವಿನೋಧ ಗಣೆಚಾರಿ,ಅನೀಲ ನಾಗೂರ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.