ನಿಂಬರ್ಗಾ ಗ್ರಾಮದ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

ಆಳಂದ:ಗ್ರಾಮದ ವಿವಿಧ ಬೇಡಿಕೆಗಳಿಗೆ ಹಾಗೂ ಅಭಿವೃದ್ಧಿ ಆಗ್ರಹಿಸಿ ನಿಂಬರ್ಗಾ ಹೋಬಳಿ ಘಟಕದವತಿಯಿಂದ ಗ್ರಾಮ ಪಂಚಾಯತ ಎದುರುಗಡೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ದೀಪ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಮಳೆ ಬಂದರೇ ಕೇಸರು ಗದ್ದೆಯಾಗುವಂತೆ ಆಗುತ್ತವೆ ರಸ್ತೆಗಳು ನಿಂಬರ್ಗಾ ಗ್ರಾಮದ ಎಲ್ಲಾ ವಾರ್ಡಗಳಿಗೆ ಸರಿಯಾಗಿ ರಸ್ತೆ, ನೀರು, ಚರಂಡಿ, ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ಪಿಡಿಓ ಬದಲಾಗಿ ಬಿಲ್ಲ ಕಲೆಕ್ಟರ್ ಕಲ್ಯಾಣಿ ನಿರ್ಮಲಕರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಘಟಕದ ಅಧ್ಯಕ್ಷ ಬಸವರಾಜ ಯಳಸಂಗಿ, ಧರ್ಮರಾಜ ವಾಗ್ದರಗಿ, ಮಹಾದೇವ ಮೇಟೆಕರ್, ಪ್ರವೀಣ ಮೇಟೆಕರ್, ಈರಣ್ಣಾ ಶರಣ, ಖ್ಯಾಮಲಿಂಗ ಕಂಬಾರ, ಶಿವರಾಜ ಕುಂಬಾರ, ಸಂಜುಕುಮಾರ ಶೀಲವಂತ, ವೈಜುನಾಥ ಪಾಟೀಲ್, ಅನೀಲಕುಮಾರ ಮಠಪತಿ, ಮಲ್ಲಪ್ಪ ಕಟ್ಟಿಮನಿ, ಶೀವಲಿಂಗ ನಾಗಶಟ್ಟಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.