ಕಲಬುರಗಿ,ಏ 16: ಅಳಂದ ತಾಲೂಕಿನ ನಿಂಬರ್ಗಾದಲ್ಲಿ ಬಿ ಆರ್ ಅಂಬೇಡ್ಕರ ಅವರ 132 ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಶಿವಲಿಂಗ ಮಹಾ ಸ್ವಾಮಿಗಳು ವಹಿಸಿದರು. ಅಂಬೇಡ್ಕರ ಮೂರ್ತಿಗೆಪಿಡಿಓ ಸುನಿಲ್ ಕುಮಾರ ರಟಕಲ್ ಹಾಗೂ ಸಾತಪ್ಪ ಮಂಟಗಿ ಮಾಲಾರ್ಪಣೆ ಮಾಡಿದರು. ಪಂಚಶೀಲ ಧ್ವಜವನ್ನು ಉಪ ತಹಸೀಲ್ದಾರ ಮಹೇಶ, ನೀಲಿ ಧ್ವಜ ಪಿಎಸ್ ಐ ರೇಣುಕಾ ನೆರವೇರಿಸಿದರು. ಸಾನಿಧ್ಯ ವಹಿಸಿದ ಶಿವಲಿಂಗ ಮಹಾಸ್ವಾಮಿಗಳ ಆಶೀರ್ವಚನ ನೀಡಿದರು
ವೇದಿಕೆಯ ಮೇಲೆ ಗ್ರಾಮದ ಮುಖಂಡರಾದ ಶ್ರೀಮಂತ ವಗ್ದರ್ಗಿ, ಶಿವಪುತ್ರ ಮಾಳಗೆ , ಮೋಹನ ನಿರ್ಮಲ್ಕರ, ಸೂರ್ಯಕಾಂತ ಜೀಡಗಿ, ರಾಜಕುಮಾರ ಸಿಂಗೆ , ಚಂದ್ರಕಾಂತ ಮಠಪತಿ, ರಾಜು ಚವ್ಹಾಣ, ಚಂದ್ರಕಾಂತ ಮೇಟಿಕಾರ, ಕಾರ್ತಿಕ ಕುಂಬಾರ, ಶಿವಲಿಂಗಪ್ಪ ಖರ್ಚನ, ದಿಗಂಬರ ಟಪ್ಪಾ, ಲಾಡ್ಲೆಸಾಬ ಮುಲ್ಲಾ,ವೀರಭದ್ರಪ್ಪ ನಂದಿ,ಶ್ರೀಶೈಲ ಮಾಲಿಪಾಟಿಲ,ಲಲಿತಾಬಾಯಿ ಖರ್ಚನ, ವಿಜಯಕುಮಾರ ಚಿಂಚೋಳಿ, ದತ್ತಪ್ಪ ಬಿದನ , ಸಿದ್ದಪ್ಪ ಅಷ್ಟಗಿ, ಭಾಗಪ್ಪ ಸಿಂಗೆ, ಶಾಮರಾವ ಜೀಡಗಿ, ಯಂಕಪ್ಪ ಬನ್ನಪಟ್ಟಿ ಯಲ್ಲವ್ವ ಸೇರಿದಂತೆ ಅನೇಕರು ಭಾಗವಹಿಸಿದರು. ಭೀಮರತ್ನ ಸಾಂಸ್ಕøತಿಕ ಕಲಾ ಸೇವಾ ಸಂಸ್ಥೆಯಿಂದ ಅನ್ನಸಂತರ್ಪಣ ನಡೆಯಿತು.ದತ್ತಾ ಡಿ ಖರ್ಚನ ನಿರೂಪಿಸಿ ಕಲ್ಯಾಣಿ ನಿರ್ಮಲ್ಕರ ವಂದಿಸಿದರು.