ನಿಂತ ಲಾರಿಗೆ ಬೈಕ್ ಡಿಕ್ಕಿ: ಮೂವರ ಸಾವು

ಕಲಬುರಗಿ,ನ.9-ನಿಂತ ಲಾರಿಗೆ ಬೈಕಿ ಡಿಕ್ಕಿ ಹೊಡೆದು, ಬೈಕ್‍ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕಮಲಾಪುರ ಸಮೀಪದ ನಾವದಗಿ ಬಳಿ ನಡೆದಿದೆ.
ಮೃತರನ್ನು ಗೋಗಿ ತಾಂಡಾದ ನಿವಾಸಿ ದೀಪಕ್ ಗೋವಿಂದ ರಾಠೋಡ್ (45), ಕಲಬುರಗಿಯ ಯುವರಾಜ್ ರಾಮಶೆಟ್ಟಿ ರಾಠೋಡ್ (17) ಮತ್ತು ರಾಹುಲ್ ಖೇಮು ಚೌವ್ಹಾಣ್ (17) ಎಂದು ಗುರುತಿಸಲಾಗಿದೆ.
ಕುಟುಂಬದವರೆಲ್ಲ ಸೇರಿ ದೇವರ ಹರಕೆ ತೀರಿಸಲು ಸಾವಳಗಿ ತಾಂಡಾಕ್ಕೆ ಕ್ರೂಸರ್ ವಾಹನದಲ್ಲಿ ಮತ್ತು ಈ ಮೂವರು ಬೈಕ್ ಮೇಲೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.