ನಿಂತ ಖಾಸಗಿ ಬಸ್ ಗಳಿಗೆ ಬೆಂಕಿ: ತಪ್ಪಿದ ಅನಾಹುತ

ಕಲಬುರಗಿ:ಅ.14: ನಾಲ್ಕು ತಿಂಗಳಿಂದ ಒಂದೇ ಕಡೆಯಲ್ಲಿ ನಿಂತ ಎರಡು ಖಾಸಗಿ ಬಸ್ ಗಳಿಗೆ ಬೆಂಕಿ ತಗುಲಿ ಭಸ್ಮವಾಗಿರುವ ಘಟನೆ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ನಗರದ ಹಾಗರಗಾ ರಸ್ತೆಯ ಮಹೆಫಿಲ್ ಎ ಖಾಸ್ ಧಾಬಾದ ಹತ್ತಿರ ಅವಘಡ ಸಂಭವಿಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಎರಡು ಬಸ್ ಗಳಿಗೆ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಸುಟ್ಟುಕರಲಾಗಿವೆ.
ಭಾರಿ ಗಾತ್ರದಲ್ಲಿ ಹೋಗೆ ಕಾಣಿಸಿಕೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಅನಾಹುತವನ್ನು ತಪ್ಪಿಸಿದರು.
ಡಿಸಿಪಿ ಕನಿಕಾ ಶೆಕ್ರೇವಾಲ್, ಎಸಿಪಿ ರಾಜಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಣ್ಣಪ್ಪಾ ಎಎಸ್ಐ,ವಿಶ್ವ ವಿದ್ಯಾಲಯ ಠಾಣೆಯ ಸಿಬ್ಬಂದಿ ಅನೀಲ್, ಮಹಾಂತೇಶ ಸೇರಿದಂತೆ ಹಲವರು ಇದ್ದರು.
ಈ ಕುರಿತು ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.