ನಿಂತಿದ್ದ ಬೈಕ್ ಸವಾರನಿಗೆ ಮತ್ತೊಂದು ಬೈಕ್ ಡಿಕ್ಕಿ -ತೀವ್ರಗಾಯ, ಸಾವು.

ಕೂಡ್ಲಿಗಿ. ಆ.12 :- ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಇಂಡಿಕೆಟರ್ ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಬೈಕ್ ಸವಾರನಿಗೆ ಮತ್ತೊಂದು ಬೈಕ್ ನ ಸವಾರ ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತೀವ್ರಗಾಯಗೊಂಡಿದ್ದು ಬಳ್ಳಾರಿ ವಿಮ್ಸ್ ನಲ್ಲಿ ಕಳೆದ ರಾತ್ರಿ ಮೃತಪಟ್ಟಿದ್ದಾನೆ ಈ  ಘಟನೆ ತಾಲೂಕಿನ ಚಂದ್ರಶೇಖರಪುರದ ಹೊರವಲಯದಲ್ಲಿ ಗುರುವಾರ ರಾತ್ರಿ ಜರುಗಿದೆ.ಚಂದ್ರಶೇಖರಪುರದ ಚನ್ನವೀರ (29) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತನು ಗ್ರಾಮದ ಹೊರವಲಯದ ಬಾಲಕಿಯರ ವಿದ್ಯಾರ್ಥಿನಿಲಯದ ಸಮೀಪದ ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಇಂಡಿಕೆಟರ್ ಹಾಕಿಕೊಂಡು ಬೈಕ್ ಮೇಲೆ ಕುಳಿತು ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗ್ಗೆ ಚಂದ್ರಶೇಖರಪುರದಿಂದ ರಾಮದುರ್ಗ ಕಡೆಗೆ ಹೋಗಲು ಕುದುರೆಡುವು ಗ್ರಾಮದ ಸುರೇಶ ತನ್ನ ಬೈಕಿನಹಿಂಬದಿ  ಸುನೀಲ್ ಎಂಬತನನ್ನು ಕೂಡಿಸಿಕೊಂಡು ಅತಿವೇಗವಾಗಿ ಯಮದೂತನಂತೆ ಬಂದು ನಿಂತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ರಸ್ತೆ ಬಿದ್ದ ಎರಡು ಬೈಕಿನವರನ್ನು ಅಲ್ಲೇ ಇದ್ದ ಅಂಜಿನಿ ಹಾಗೂ ಇತರರು ಸೇರಿ ಅವರನ್ನು ರಕ್ಷಿಸಿದರು ಆದರೆ ತೀವ್ರಗಾಯಗೊಂಡಿದ್ದ ಚನ್ನವೀರನನ್ನು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿರುತ್ತಾನೆಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಂದ್ರಶೇಖರಪುರದ ಅಂಜಿನಪ್ಪ ನೀಡಿದ ದೂರಿನಂತೆ  ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
One attachment • Scanned by Gmail