ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ: ಸಹೋದರಿಯರ ಸಾವು

ಶಹಾಪುರ,ನ.7-ಬೈಕನಿಂದ ಬಿದ್ದು ಗಾಯಗೊಂಡಿದ್ದ ತನ್ನ ಅಕ್ಕನನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕಾರಿನಲ್ಲಿ ಕರೆ ತರುತ್ತಿದ್ದಾಗ ನಿಂತಿದ್ದ ಟ್ರ್ಯಾಕ್ಟರಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಕ್ಕ-ತಂಗಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಶಹಾಪುರ ತಾಲುಕಿನ ರಸ್ತಾಪುರ ಕಮಾನ ಸಮೀಪದ ಶಾಲೆ ಹತ್ತಿರ ನಿನ್ನೆ ತಡ ರಾತ್ರಿ ನೆಡೆದಿದೆ.
ಅಫಿಜಾಬೇಗಂ ಕಾಶಿಮಸಾಬ್ (60), ಅಭಿದಾಬೇಗಂ ಅಬ್ದುಲನಬಿ (50) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಶುಕ್ರವಾರ ರಾತ್ರಿ ಅಫಿಜಾಬೇಗಂ, ಬಹಿರ್ದೆಸೆಗೆಂದು ಹೊರಗಡೆ ಹೊಗಿ ಮರಳಿ ಮನೆಗೆ ಬರುತ್ತಿದ್ದಾಗ ನವನಗರ ರಸ್ತಾಪುರ ರಸ್ತೆಯಲ್ಲಿ ಅಪರಿಚತ ಬೈಕವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಫಿಜಾಬೆಗಂಳನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕಾರಿನಲ್ಲಿ ಕರೆ ತರುತ್ತಿದ್ದಾಗ ರಸ್ತಾಪುರ ಕಮಾನ ಸಮೀಪದ ಸರ್ಕಾರಿ ಹೈಸ್ಕೂಲ್ ಮುಂದಿನ ರಸ್ತೆಯಲ್ಲಿ ಮರಳು ತುಂಬಿಕೊಂಡು ನಿಂತಿದ್ದ ಟ್ರಾಕ್ಟರಗೆ ಕಾರು ಡಿಕ್ಕಿ ಹೊಡೆದದಿದ್ದರಿಂದ ಅಫಿಜಾಬೇಗಂ, ಮತ್ತು ಅಭಿದಾಬೇಗಂ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಕುಲುಸುಂಬಿ ಮೈಬೂಬ ಸಾಬ್ (59) ಅವರನ್ನು ಕಲಬುರ್ಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಹಾಪುರ ಪಿ.ಐ ಚೆನ್ನಯ್ಯ ಹೀರೆಮಠ ಅವರು ಭೇಟಿ ನೀಡಿ ಅಪಘಾತ ವಿವರಗಳನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಶಹಾಪುರ ಪಿ.ಎಸ್.ಐ ಚಂದ್ರಕಾಂತ ಮಾಕಾಲೆ ಸೇರಿದಂತೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಲಿ ಸದಸ್ಯರಾದ ನಾಗಣ್ಣ ಪೂಜಾರಿ ಹಲವಾರು ಜನ ಹಾಜರಿದ್ದರು.