ನಿಂತಿದ್ದ ಕ್ಯಾಂಟರ್ ಲಾರಿಗೆ ಓಮಿನಿ ವ್ಯಾನ್ ಡಿಕ್ಕಿ 3 ಜನ ಸಾವು

ಚಿತ್ರದುರ್ಗ:ಜ 06: ನಿಂತಿದ್ದ ಕ್ಯಾಂಟರ್ ಲಾರಿಗೆ ಓಮಿನಿ ವ್ಯಾನ್ ಡಿಕ್ಕಿ ಹೊಡೆದು 3 ಜನ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ತಾಲ್ಲೂಕಿನ ಕ್ಯಾದಿಗೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದೆ‌
ಮೃತಪಟ್ಟವರನ್ನು ಬೆಂಗಳೂರಿನ ಕಮಗೀರಿ ಮೂಲದ ರೇಣುಕಮ್ಮ(68), ಶಂಕರ್(39) ಹಾಗೂ ಶಿವರಾಜು(45) ಎಂದು ಗುರುತಿಸಲಾಗಿದೆ.
ಜಯಶ್ರೀ ಮತ್ತು ಮಕ್ಕಳಾದ ಮೌನಿಖಾ, ಶೋಭಿತ ಇವರುಗಳು ಗಾಯಗೊಂಡಿದ್ದು, ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಬೆಂಗಳೂರಿನವರಾದ ಜಯಶ್ರೀ ಹಾಗೂ ಶಂಕರ್ ಅವರುಗಳು ತಮ್ಮ ವೈಯಕ್ತಿಕ ಕೆಲಸದ ಮೇಲೆ ದಾವಣಗೆರೆಗೆ ಇಂದು ಬೆಳಗ್ಗೆ 3 ಗಂಟೆಗೆ ಆಗಮಿಸಿದ್ದರು, ತಮ್ಮ ಕೆಲಸ ಮುಗಿದ ಕಾರಣ ವಾಪಸ್ಸು ಬೆಂಗಳೂರಿಗೆ ತೆರಳುವ ವೇಳೇಯಲ್ಲಿ ಕ್ಯಾದಿಗೆರೆ ಸಮೀಪದಲ್ಲಿ ರಾಷ್ತ್ರೀಯ ಹೆದ್ದಾರಿ 48
ರಸ್ತೆ ಪಕ್ಕೆದಲ್ಲೇ ನಿಂತಿದ್ದ ಕ್ಯಾಂಟರ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೆಣುಕಮ್ಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಂಕರ್ ಹಾಗೂ ಶಿವರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.