ನಿಂಗಯ್ಯಮುತ್ಯಾ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ವಿಶೇಷ ಪೂಜೆ

ತಾಳಿಕೋಟೆ:ಜು.16: ತಾಲೂಕಿನ ಬಂಡೆಪ್ಪನಹಳ್ಳಿ ಗ್ರಾಮದಲ್ಲಿಯ ಶ್ರೀ ನಿಂಗಯ್ಯಮುತ್ಯಾ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ಬೆಟ್ಟಿ ನೀಡಿದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೆಟ್ಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮಕ್ಕೆ ಬೆಟ್ಟಿ ನೀಡಿದ ಸಂದರ್ಬದಲ್ಲಿ ಕೆಪಿಸಿಸಿ ಸದಸ್ಯ ದೇವರ ಹಿಪ್ಪರಗಿ ಮತಕ್ಷೇತ್ರದ ನಾಯಕ ಬಿ.ಎಸ್.ಪಾಟೀಲ(ಯಾಳಗಿ) ಅವರು ಸಿದ್ದರಾಮಯ್ಯನವರನ್ನು ಸನ್ಮಾನಿಸಿ ಬರಮಾಡಿಕೊಂಡರು.

ಈ ಸಮಯದಲ್ಲಿ ಮುಖಂಡರುಗಳಾದ ಬಿ.ಎಸ್.ಗಬಸಾವಳಗಿ, ಎಂ.ಜಿ.ಪಾಟೀಲ, ಪ್ರಭುಗೌಡ ಮದರಕಲ್ಲ, ಯಮನಪ್ಪಸೌಕಾರ ಮಸರಕಲ್ಲ, ಯುತ್ ಕಾಂಗ್ರೇಸ್ ಅಧ್ಯಕ್ಷ ಫಯಾಜ್ ಉತ್ನಾಳ, ಹಣಮಗೌಡ ಬಿರಾದಾರ, ಮಲ್ಲಯ್ಯ ಸಾಲಿಮಠ, ಶಿವರಡ್ಡಿ ಐನಾಪೂರ, ಡಾ.ಭಲವಂತ್ರಾಯ ನಡಹಳ್ಳಿ. ಮೊದಲಾದವರು ಇದ್ದರು.