ನಾಹಮೋಹನದಾಸ್ ಆಯೋಗದ ವರದಿ ಜಾರಿಗೆ ಒತ್ತಾಯ

ಕಾರಟಗಿ:ನ:04:ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡವರ ಮೀಸಲಾತಿ ಜಾರಿಗೊಳಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಮಾಜಿ ಸಚಿವ ಶಿವರಾಜ ತಂಗಡಿಗಿ ಪತ್ರ ಬರೆದು ಮೀಸಲಾತಿ ಜಾರಿಗೋಳಿಸಲು ಕೋರಿದ್ದಾರೆ.
ಪರಿಶಿಷ್ಟ ಪಂಗಡದವರಿಗೆ ಪ್ರಸ್ತುತದಲ್ಲಿ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ.ಜನಸಂಖ್ಯೆ ಅಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಕೊರಿದ್ದಾರೆ. ಈ ಹಿಂದಿನ ಮೈತ್ರಿ ಸರ್ಕಾರದ ಅವದಿಯಲ್ಲಿ ವಾಲ್ಮೀಕಿ ಗುರುಪೀಠದ ಪರಮ ಪೂಜ್ಯ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳು ಹಾಗೂ ವಿವಿಧ ಸಂಘಟನೆಗಳು ಪಾದಯಾತ್ರೆ ಮೂಲಕ ಬೆಂಗಳೂರುಗೆ ಅಗಮಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ್ದರು.
ಇದರ ಪರಿಣಾಮ ಮೈತ್ರಿ ಸರಕಾರ ದಿ:22:07:2019 ರಂದು ಅದೇಶ ಹೊರಡಿಸಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಹಮೋಹನದಾಸ ರವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದು.
ಅಯೋಗವು ಸಮಾಲೋಚನ ಸಭೆಗಳನ್ನು ನಡೆಸಿ ವರದಿಯನ್ನು ಸಿದ್ದಗೊಳಿಸಿ ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ವರಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7.5 ರಷ್ಟು ಮೀಸಲಾತಿ ಸೂಕ್ತವೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ವರದಿಯನ್ನು ಪಡೆದು ಸುಮಾರು ಮೂರು ತಿಂಗಳಾದರೂ ಅನುಷ್ಠಾನವಾಗದೆ ಇರುವುದು ವಾಲ್ಮೀಕಿ ನಾಯಕ ಸಮುದಾಯದಕ್ಕೆ ಬೇಸರನ್ನುಂಟುಮಾಡಿದೆ.
ಈಗಾಗಲೇ ಸರ್ಕಾರಕ್ಕೆ ಗೊತ್ತಿದ್ದಂತೆ 2004-05 ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ.7.5 ಮೀಸಲಾತಿ ಕೊಟ್ಟು ಅದೇಶವನ್ನು ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಹಮೋಹನದಾಸ ನೇತೃತ್ವದ ಅಯೋಗ ನೀಡಿರುವ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ವರಗೆ ಹಾಗೂ ಪರಿಶಿಷ್ಟ ಪoಗಡಕ್ಕೆ ಶೇ.3 ರಿಂದ 7.5 ರಷ್ಟು ಹೆಚ್ಚಿಸುವ ವರದಿಯನ್ನು ಕೂಡಲೆ ಸಚಿವ ಸಂಪುಟದ ಅನುಮೋದನೆ ಪಡೆದು ಜಾರಿಗೋಳಿಸಬೇಕೆಂದು ಮಾಜಿ ಸಚಿವರು ಶಿವರಾಜ್ ತಂಗಡಿಗಿಯವರು ಕೋರಿರುತ್ತಾರೆ.