ನಾಸಿರ್ ಸ್ವಾಗತಕ್ಕೆ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ಬಳ್ಳಾರಿ: ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರ ಸ್ವಾಗತಕ್ಕೆ ವಿರೋಧವಾಗಿ ನಗರದಲ್ಲಿ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ತಾವು ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದಾಗ ನಾಸೀರ್ ಹುಸೇನ್ ಅವರು ಪಾಕಿಸ್ತಾನ ಪರ ತನ್ಮ ಬೆಂಬಲಿಗರಿಂದ ಜೈಕಾರ ಹಾಕಿಸಿದ್ದರು. ಅಂತಹವರಿಗೆ ಸ್ವಾಗತವೇಕೆ ಎಂದು ಪ್ರತಿಭಟನೆ ನಡೆಸಿದ ಬಿಜೆಪಿ.

ಪಕ್ಷದ ಜಿಲ್ಲಾ ಅಧ್ಯಕ್ಷ ಸೇರಿದಂತೆ 50 ಕ್ಕೂ ಜನರನ್ನು ಪೊಲೀಸರು ಬಂಧಿಸಿದ್ದಾರೆ‌

ನಾಸಿರ್ ಹುಸೇನ್ ವಿರುದ್ಧ ಹೋರಾಟ ಮಾಡಲು ಹೋದರೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಕಾರ್ಯಕರ್ತರನ್ನು ಅನಧಿಕೃತವಾಗಿ ಬಂಧಿಸಲಾಗಿದೆಂದು ಬಿಜೆಪಿ ಆರೋಪಿಸಿತ್ತು.

ಬಿಡುಗಡೆ ಮಾಡಿದ ಮೇಲೂ ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಬಿಜೆಪಿಯವರು ಡಿಸಿ ಕಚಡೆರಿ ಮುಂದೆ ನಾಸೀರ್ ವಿರುದ್ದ ಪ್ರತಿಭಟನೆ ನಡೆಸಿದರು.