ನಾಸಿಕ್‌ನಲ್ಲಿ ೩.೬ ತೀವ್ರತೆ ಭೂಕಂಪನ

ಮುಂಬೈ, ನ ೨೩- ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್‌ಮಾಪಕದಲ್ಲಿ ೩.೬ ರಷ್ಟು ತೀವ್ರತೆ ದಾಖಲಾಗಿದೆ.
ನಾಸಿಕ್‌ನ ಪಶ್ಚಿಮಕ್ಕೆ ೮೯ ಕಿಲೋಮೀಟರ್‌ಗಳಲ್ಲಿ ಮುಂಜಾನೆ ೪ ಗಂಟೆಯ ಸುಮಾರಿಗೆ ೩.೬ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.
ಮುಂಜಾನೆ ೪ ಗಂಟೆ ಸುಮಾರಿಗೆ ಅಕ್ಷಾಂಶ ೧೯.೯೫ ಡಿಗ್ರಿ ಉತ್ತರ ಮತ್ತು ರೇಖಾಂಶ ೭೨.೯೪ ಡಿಗ್ರಿ ಪೂರ್ವಕ್ಕೆ ಈ ಭೂಕಂಪ, ನೆಲಮಟ್ಟದಿಂದ ಸುಮಾರು ಐದು ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ಸ್ಪಷ್ಟಪಡಿಸಿದೆ.
ನಾಸಿಕ್‌ನಿಂದ ೮೯ ಕಿಲೋಮೀಟರ್ ಪಶ್ಚಿಮದಲ್ಲಿ ಭೂಕಂಪ ಸಂಭವಿಸಿದೆ. ಅದರೆ ಯಾವುದೇ ಸಾವು ನೋವು ಅಥವಾ ಆಸ್ತಿ ಪಾಸ್ತಿ ನಷ್ಟದ ಬಗ್ಗೆ ವಿವರಗಳು ತಿಳಿದು ಬಂದಿಲ್ಲ.
ನಿನ್ನೆ ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ೪.೩ ತೀವ್ರತೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಕೇಂದ್ರ ಕಾರ್ಗಿಲ್‌ನಿಂದ ಉತ್ತರಕ್ಕೆ ೧೯೧ ಕಿಲೋಮೀಟರ್ ದೂರದಲ್ಲಿತ್ತು.
ನವೆಂಬರ್ ತಿಂಗಳಿನಲ್ಲಿ ದೇಶದ ಹಲವಾರು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ. ಇದಕ್ಕೂ ಮುನ್ನ ನವೆಂಬರ್ ೧೪ ರಂದು, ಪಂಜಾಬ್‌ನ ಅಮೃತಸರದಲ್ಲಿ ರಿಕ್ಟರ್ ಮಾಪಕದಲ್ಲಿ ೪.೧ ತೀವ್ರತೆಯ ಭೂಕಂಪ ಸಂಭವಿಸಿತ್ತು.
ನವೆಂಬರ್ ೧೦ ರಂದು, ಅರುಣಾಚಲ ಪ್ರದೇಶದಲ್ಲಿ ೫.೭ ರ ತೀವ್ರತೆಯ ಭೂಕಂಪ ಸಂಭವಿಸಿದ್ದರೇ. ಗಮನಾರ್ಹವಾಗಿ, ನವೆಂಬರ್ ೯ ರಂದು ನೇಪಾಳದ ಗಡಿಯುದ್ದಕ್ಕೂ ಉತ್ತರಾಖಂಡ್‌ನ ಪಿಥೋರಗಢ್ ಬಳಿಯ ಹಿಮಾಲಯ ಪ್ರದೇಶದಲ್ಲಿ ೬.೩ ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಉತ್ತರ ಭಾರತದಾದ್ಯಂತ ಪ್ರಬಲ ಕಂಪನಗಳು ಸಂಭವಿಸಿದವು.