ನಾವ್ಯಾರೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿಲ್ಲ; ಬಿ.ಸಿ ಪಾಟೀಲ್ ಸ್ಪಷ್ಟನೆ

ಚಿತ್ರದುರ್ಗ, ಮಾ.6: ನಮ್ಮ ಜೊತೆ ಬಿಜೆಪಿಗೆ ಬಂದ ಯಾರೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ನಮ್ಮ ಒಟ್ಟಿಗೆ ಇದ್ದ ಸಚಿವ ನಾರಾಯಣ ಗೌಡ ಹೋಗುತ್ತಾರೆ ಎಂಬ ಮಾಹಿತಿ ಇದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಬಿ.ಸಿ ಪಾಟೀಲ್ ಹೇಳಿದ್ದಾರೆ.ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ಸಚಿವ ನಾರಾಯಣ ಗೌಡ ಒಬ್ಬರೂ ಮಾತ್ರ ಹೋಗುತ್ತಾರೆ ಎನ್ನಲಾಗುತ್ತಿದೆ ಅಷ್ಟೇ. ಆದರೆ ಇನ್ನೂ ಇದು ಖಚಿತ ಅಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗಲಿದ್ದು, ಉಳಿದಂತೆ ನಾವುಗಳೂ ಯಾರು ಕೂಡ ಹೋಗುವುದಿಲ್ಲ ಎಂದು ಸ್ವಷ್ಟಪಡಿಸಿದ ಅವರು, ಕಾಂಗ್ರೆಸ್ ನಿಂದ ಹಲವರು ಬಿಜೆಪಿಗೆ ಬರುತ್ತಿದ್ದಾರೆ ಎಂದರು.ಬಿಜೆಪಿಗೆ ಅಭಿವೃದ್ಧಿ ಪರವಾದ ಕೆಲಸಗಳು ತುಂಬಾ ಇವೆ. ಆದರೆ ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ.ಅವರೀಗಾ ನಿರುದ್ಯೋಗಿಗಳಾಗಿದ್ದು, ಜೀವಂತ ಇದ್ದೀವಿ ಅಂತ ತಿಳಿಸಲು ಈ ರೀತಿ ಸುಮ್ಮನೆ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.ಸಿಎಂ ಕಲೆಕ್ಷನ್ ಮಾಡ್ತಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್ ಕಲೆಕ್ಷನ್ ಶೂರರಾಗಿದ್ದು, ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಅವರು ಹೇಳುತ್ತಾರೆ ಎಂದು ಟಾಂಗ್ ನೀಡಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿಗರಿಗೆ ಟಿಕೆಟ್ ತಪ್ಪುವ ವಿಚಾರ ಸತ್ಯಕ್ಕೆ ದೂರದದ್ದು, ನಮ್ಮ ಪಕ್ಷಕ್ಕೆ ಯಡಿಯೂರಪ್ಪ ಭೀಷ್ಮ ಇದ್ದ ಆಗೆ ಎಂದು ಹೇಳಿದರು.