ನಾವು ಹುಸೇನ್ ನಗರ ನಿವಾಸಗಳು ಮತದಾನದಿಂದ ದೂರ ಉಳಿಯುವೆವು

ಬಳ್ಳಾರಿ,ಏ.18: ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಿಂಜಾರ/ನದಾಫ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ರಾಷ್ಟ್ರೀಯ ಪಕ್ಷಗಳು ವಂಚಿಸಿವೆ
ಅದಕ್ಕಾಗಿ ನಾವು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎನ್ನುತ್ತಿದ್ದಾರೆ
20 ನೇ ವಾರ್ಡಿನ ನಿವಾಸಿಗಳು ಇಂದು ಹುಸೇನ್ ನಗರದ ಮಸೀದಿಯ ಸಭಾಂಗಣದಲ್ಲಿ ಏಕಾಏಕಿ ಸಭೆ ನಡೆಸಿ. ರಾಷ್ಟ್ರೀಯ ಪಕ್ಷಗಳ ನಡೆಯನ್ನು ಖಂಡಿಸಿದ್ದಲ್ಲದೆ, ಮತದಾನ ಪ್ರಕ್ರಿಯೆಯಿಂದ ದೂರವಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಈ ನಮ್ಮ ವಾರ್ಡಿನಲ್ಲಿ 10,700 ಮತದಾರರಿದ್ದಾರೆ. ಈ ಪೈಕಿ ಪಿಂಜಾರ ನದಾಫ ಸಮುದಾಯದ 1800 ಮತಗಳು ಇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ನಮ್ಮ ಸಮುದಾಯವನ್ನು ಕಡೆಗಣಿಸಿವೆ ಎಂದು ಅವರು ಆರೋಪಿಸಿದ್ದಾರೆ.
ವಾರ್ಡಿನ 1ನೇ ರಸ್ತೆಯಿಂದ 12 ನೇ ರಸ್ತೆಯಲ್ಲಿರುವ ಮೂರೂ ಬೂತ್ ಗಳ ವ್ಯಾಪ್ತಿಯ ಸಮುದಾಯದ ಮತದಾರರು ಈ ಬಾರಿ ಯಾವ ಪಕ್ಷಕ್ಕೂ ಮತ ಹಾಕುವುದಿಲ್ಲವೆಂದು ಅವರು ಹೇಳಿದ್ದಾರೆ. ಮತದಾನದ ದಿನಕ್ಕೆ ಇವರ ನಿರ್ಧಾರ ಏನಾಗಿರುತ್ತೆ ಎಂಬುದನ್ನು ಕಾದು‌ನೋಡಬೇಕಿದೆ.