ನಾವು ಸತ್ಯದ ಪರ: ಗೃಹಸಚಿವ ಬೊಮ್ಮಾಯಿ

ಕಲಬುರಗಿ ಏ 6:ನಾವು ಸತ್ಯದ ಪರವಾಗಿದ್ದೇವೆ. ಯಾರ ಪರ ಅಥವಾ ವಿರುದ್ಧವಾಗಿ ಇಲ್ಲ.ಕ್ರಮಬದ್ಧವಾಗಿ ನ್ಯಾಯ ಸಮ್ಮತವಾಗಿ ಕ್ರಮ ಕೈಗೊಳ್ಳಲು ಎಸ್‍ಐಟಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ಕಲಬುರಗಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಎಸ್.ಐ.ಟಿ ವಿಚಾರಣೆ ಬಗ್ಗೆ ಅತೃಪ್ತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯ ಸಮ್ಮತ ಕೆಲಸ ಮಾಡಲು ಸೂಚನೆ ನೀಡಿದ್ದೇನೆ.ಏನಾದರೂ ಸಮಸ್ಯೆ ಇದ್ದರೆ ಎಸ್.ಐ.ಟಿ ಅವರೇ ಹೇಳುತ್ತಾರೆ.ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಹೈಕೋರ್ಟ್ ತನಿಖೆ ಪ್ರಗತಿಯ ಮಾಹಿತಿ ಕೇಳಿದ್ದರ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ,ಏನು ಪ್ರಕ್ರಿಯೆಗಳಿವೆ ಅವೆಲ್ಲವೂ ಕಾನೂನು ಪ್ರಕಾರ ಮಾಡಲಾಗುವುದು ಎಂದು ಉತ್ತರಿಸಿದರು.