ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ

ಬೀದರ,ಡಿ.22- ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಮೀನಕೇರಾ , ಬಾಪೂರು ಹಾಗೂ ಮನ್ನಾಎಖೆಳ್ಳಿ ಗ್ರಾಮಗಳಲ್ಲಿ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ, ಚಿಕ್ಕಪೇಟ್ ವತಿಯಿಂದ ಮತದಾನದ ಜನ ಜಾಗೃತಿಯನ್ನು ಜಿಲ್ಲೆಯ ಮಕ್ಕಳ ಹಕ್ಕುಗಳ ಶಿಕ್ಷಣ ಹಾಗೂ ಜಾಗೃತಿ ಆಂದೋಲನ ಯೋಜನೆ ಅಡಿಯಲ್ಲಿ ನಿನ್ನೆ “ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ” ಎಂಬ ಅಭಿಯಾನ ಕಾರ್ಯಕ್ರಮ ಜರುಗಿತು.
ಗ್ರಾಮ ಪಂಚಾಯತ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತನಾದದ ಹಕ್ಕು ಚಲಾಯಿಸುವಂತೆ ಸಾರ್ವಜನಿಕರಿಗೆ ಕರಪತ್ರಗಳ ವಿತರಿಸಿ, ಮತದಾನದ ಮಹಾತ್ವವನ್ನು ಪ್ರಚಾರ ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಭಾಕರ ಮಾಳ್ಗೆ ಮಾತನಾಡಿ ಸಮಾಜ ಕ್ರೀಯಾ ಶೀಲರು, ಮಕ್ಕಳ ಹಕ್ಕುಗಳ ಶಿಕ್ಷಣ ಹಾಗೂ ಜಾಗೃತಿ ಆಂದೋಲನ ಯೋಜನೆ ತಮ್ಮ ಗ್ರಾಮ ಪಂಚಾಯತನಲ್ಲಿ ನಡೆಯುವ ಚುನಾವಣೆಯನ್ನು ನಾವು ನಮ್ಮ ಗ್ರಾಮ ಪಂಚಾಯತಿ ಅಭಿವೃಧ್ಧಿ ಹೊಂದಬೇಕಾದರೆ. ಅದಕ್ಕೆ ನಮ್ಮ ಸಂವಿಧಾನಿಕ ಮತಹಕ್ಕು ಚಲಾವಣೆ ಮಾಡುವುದು ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದರು.
ಮಕ್ಕಳ ಸ್ನೇಹಿ ಎಂದು ಗುರುತಿಸಿಕೊಂಡಿರುವ ದೀಲಿಪ್ ರವರು ಗ್ರಾಮದ ಎಲ್ಲಾ ಓಣಿಗಳಲ್ಲಿ / ವಾರ್ಡಗಳಲ್ಲಿ ಹಾಗೂ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ, ಬಸ್‍ನಿಲ್ದಾಣಗಳಲ್ಲಿ ಜನರಿಗೆ ಕರಪತ್ರಗಳನ್ನು ವಿತರಿಸಲಾಯಿತು.
ಈ ಅಭಿಯಾನದ ಮೂಲಕ “ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ “ಎನ್ನುವ ವಿಚಾರಗಳನ್ನು ತಿಳಿಸಿ ಮತದಾರರು ಮತ ಚಲಾಯಿಸುವಂತೆ ಜಾಗೃತಿಯನ್ನು ಮೂಡಿಸಲಾಯಿತು ಎಂದು ಪ್ರಭಾಕರ ಮಾಳ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.