ತಾಳಿಕೋಟೆ:ಜೂ.23: ಯಾವುದೇ ಹಬ್ಬ ಹರಿದಿನಗಳು ಜಾತ್ರೆ ಉತ್ಸವಗಳು ಯಾವುದೇ ಒಂದು ಕೋಮಿಗೆ ಸೀಮಿತವಾಗಿರದೇ ಎಲ್ಲರೂ ಆಚರಿಸಿಕೊಂಡುಬರುವಂತಹ ಈ ಉತ್ಸವಗಳಲ್ಲಿ ಜಾತಿ ಬೇದವೆಂಬುದು ಬೇಡಾ ಎಲ್ಲರಲ್ಲಿ ಅಣ್ಣತಮ್ಮಂದಿರೆಂಬ ಭಾವನೆ ಇರಲಿ ಒಂದೇ ತಾಯಿಯ ಮಕ್ಕಳಾದ ನಾವು ಭಾರತೀಯರೆಂಬ ಭಾವನೆ ಮೂಡುತ್ತಾ ಸಾಗಲೆಂದು ಬ.ಬಾಗೇವಾಡಿ ಡಿ.ಎಸ್.ಪಿ. ಕರುಣಾಕರಶೆಟ್ಟಿ ಅವರು ಹೇಳಿದರು.
ಗುರುವಾರರಂದು ಇದೇ ದಿ.23 ರಿಂದ ಪ್ರಾರಂಭಗೊಳ್ಳಲಿರುವ ಶ್ರೀ ಖಾಸ್ಗತೇಶ್ವರ ಹಾಗೂ ಶ್ರೀ ಗ್ರಾಮದೇವತೆಯ ಜಾತ್ರೋತ್ಸವ ಮತ್ತು ಬಕ್ರೀದ್ ಹಬ್ಬ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಶಾಂತಿಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಈ ಹಿಂದಿನಿಂದ ತಾಳಿಕೋಟೆ ಇತಿಹಾಸ ನಾನು ಬಲ್ಲೆ 22 ವರ್ಷಗಳ ಹಿಂದೆ ಬ.ಬಾಗೇವಾಡಿಯಲ್ಲಿ ಪಿ.ಎಸ್.ಐ.ಯಾಗಿ ಸೇವೆ ಸಲ್ಲಿಸಿದ್ದ ನಾನು ಈಗ ಡಿಎಸ್‍ಪಿ ಸ್ಥಾನ ಅಲಂಕಿರಿಸಿದ್ದೇನೆಂದರು. ಪ್ರಜೆಗಳೇ ಆಡಳಿತಗಾರ ಎಂಬಂತ ಇಂದಿನ ದಿನಮಾನದಲ್ಲಿ ಸಮಸ್ಯೆಗಳ ಸುಳಿವು ಬರುವದು ಕಡಿಮೆ ಎಂದೆನಿಸಿದೆ ಈಗಾಗಲೇ ತಿಳಿಸಿದಂತೆ ಈ ಉತ್ಸವಗಳಲ್ಲಿ ಮಹಿಳೆಯರೇ ಹೆಚ್ಚಿಗೆ ಪಾಲ್ಗೊಳ್ಳುತ್ತಾರೆಂಬುದನ್ನು ಅರೀತ ನಾನು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿಗೆ ನಿಯೋಜಿಸುತ್ತೇನೆಂದರು. ಹಿಂದೂ-ಮುಸ್ಲಿಂ ಅನ್ನುವದು ಹೆಸರಿಗಷ್ಟೇ ಎಲ್ಲರಲ್ಲಿ ಸಹಬಾಳ್ವೆ ಎಂಬುದು ಬೇಕು ಎಂದು ಹೇಳಿದ ಅವರು ಪುರಸಭೆ ಹೊಂದಿದ ತಾಳಿಕೋಟೆ ಪಟ್ಟಣ ಮುಂದಿನ ದಿನಮಾನದಲ್ಲಿ ನಗರಸಭೆಯಾಗಿ ಮಾರ್ಪಟ್ಟು ಎಲ್ಲರಿಗೂ ಸೇವೆ ಲಭ್ಯವಾಗಲಿ ಎಪಿಎಂಸಿಯ ಮುಖ್ಯ ಕಚೇರಿಯೂ ಕೂಡಾ ಈ ಪಟ್ಟಣದಲ್ಲಿದ್ದು ವ್ಯಾಪಾರ ಪಡೆಮೂಲ ಸ್ಥಳವಾಗಿ ಹೊರಹೊಮ್ಮಿದ ತಾಳಿಕೋಟೆಯ ಪುಣ್ಯಭೂಮಿಯಲ್ಲಿ ಜನರ ಕಷ್ಟದ ಜೊತೆ ನಾವಿದ್ದೇವೆಂದ ಅವರು ಬೆಲೆ ಬಾಳುವ ಚಿನ್ನದಂತಹ ವಸ್ತು ಒಡವೆಗಳನ್ನು ಜಾತ್ರೋತ್ಸವಗಳಲ್ಲಿ ಹಾಕಿಕೊಂಡು ಬರದೇ ಮನೆಗಳಲ್ಲಿ ಬದ್ರತೆಯೊಂದಿಗೆ ಇಟ್ಟು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಇನ್ನೋರ್ವ ನೂತನವಾಗಿ ಅಧಿಕಾರ ವಹಿಸಿಕೊಂಡ ಪಿಎಸ್‍ಐ ರಾಮನಗೌಡ ಸಂಕನಾಳ ಅವರು ಮಾತನಾಡಿ ಕ್ಷೇತ್ರದ ಜನರ ಅಪೇಕ್ಷೆಯಂತೆ ಬದಲಾವಣೆ ಮಾಡುವಂತವುಗಳನ್ನು ಮಾಡುತ್ತೇನೆ ಅಂಗಡಿ ಮುಗ್ಗಟ್ಟುಗಳ ಮಾಲಿಕರು ತಮ್ಮ ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ ದಿನನಿತ್ಯ ಪೊಲೀಸ್ ಸಿಬ್ಬಂದಿಯವರು ನಿರ್ವಹಿಸಬೇಕಾದಂತಹ ಕಾರ್ಯಗಳಿಗೆ ಮುಂದಾಗುತ್ತೇನೆ ಟ್ರಾಪಿಕ್ ವಿಷಯಕ್ಕೆ ಸಂಬಂದಿಸಿ ವ್ಯವಸ್ಥೆ ಮಾಡಲಾಗುತ್ತದೆ ಇಂತಹ ವಿಷಯಕ್ಕೆ ಸಂಬಂದಿಸಿ ಎಲ್ಲರೂ ಸಹಕರಿಸಬೇಕೆಂದ ಅಧಿಕಾರಿ ರಾಮನಗೌಡರು ಬದಲಾವಣೆ ಮಾಡಬೇಕೆಂಬ ಉದ್ದೇಶದಿಂದ ನಾನು ಬಂದಿದ್ದೇನೆ ಆದರೂ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಇನ್ನೋರ್ವ ಅಪರಾದ ವಿಭಾಗದ ಪಿ.ಎಸ್.ಐ. ಆರ್.ಎಸ್.ಭಂಗಿ ಅವರು ಮಾತನಾಡಿ ತಾಳಿಕೋಟೆ ಪಟ್ಟಣದಲ್ಲಿ ಜರುಗುವ ಉತ್ಸವಗಳಲ್ಲಿ ನಮ್ಮ ಇಲಾಖೆಯು ಯೋಗ್ಯ ಬಂದೋಬಸ್ತನ್ನು ಮಾಡುತ್ತಾ ಸಾಗಿಬಂದಿದೆ ಜಾತ್ರೆ ಉತ್ಸವಗಳಲ್ಲಿ ಮಹಿಳೆಯರೇ ಹೆಚ್ಚಿಗೆ ಆಗಮಿಸುತ್ತಿದ್ದರಿಂದ ಚಿನ್ನದ ಸರಗಳನ್ನು ಹಾಕಿಕೊಂಡು ಬರುವದು ಬೇಡಾ ಬಂದರೆ ಲಕ್ಷದಿಂದ ಇರಬೇಕು ನಿಮ್ಮ ವಸ್ತುಗಳ ಬಗ್ಗೆ ನಿವು ಕಾಳಜಿ ವಹಿಸುವದು ಅಗತ್ಯವಾಗಿದೆ ಈ ಕುರಿತು ತಮ್ಮ ತಮ್ಮ ಮನೆಯಲ್ಲಿಯ ಮಹಿಳೆಯರಿಗೆ ಸೂಚಿಸಬೇಕೆಂದರು.
ಶ್ರೀ ಖಾಸ್ಗತ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಬಾಪುಗೌಡ ಪಾಟೀಲ, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ಶ್ರೀಮತಿ ನೀಲಮ್ಮ ಪಾಟೀಲ ಅವರು ಮಾತನಾಡಿ ಎರಡು ಜಾತ್ರೆಗಳು ಒಗ್ಗೂಡಿ ಆಗಮಿಸಿದೆ ಅದರ ಜೊತೆಗೆ ಬಕ್ರೀದ್ ಹಬ್ಬವು ಆಗಮಿಸಿದೆ ಈ ಕಾರಣ ಜನದಟ್ಟನೆ ಹೆಚ್ಚಿಗೆ ಆಗಮಿಸುವ ನಿರಿಕ್ಷೆ ಇದೆ ತಾಳಿಕೋಟೆಯಲ್ಲಿ ಹಿಂದೂ-ಮುಸ್ಲಿಂರ ಸಂಬಂದವು ಸಹೋದರತ್ವ ಭಾವನೆ ಹೊಂದಿದೆ ಅನೇಕ ಸಲ ಇಂತಹ ಉತ್ಸವಗಳನ್ನು ಆಚರಿಸುತ್ತಾ ಬರಲಾಗಿದೆ ಆದರೂ ಪೊಲೀಸ್ ಇಲಾಖೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದರು.
ಈ ಸಮಯದಲ್ಲಿ ಪ್ರಭುಗೌಡ ಮದರಕಲ್ಲ, ವಿಜಯಸಿಂಗ್ ಹಜೇರಿ, ಜಿ.ಎಸ್.ಕಶೆಟ್ಟಿ, ಎಂ.ಜಿ.ಪಾಟೀಲ, ಬಿ.ಎಸ್.ಗಬಸಾವಳಗಿ, ಬಿ.ಎನ್.ಹಿಪ್ಪರಗಿ, ಎಸ್.ಎನ್.ಪಾಟೀ, ವೀರುಪಾಕ್ಷಯ್ಯ ಹಿರೇಮಠ(ಹಂಪಿ), ಡಿ.ವ್ಹಿ.ಪಾಟೀಲ, ಅಣ್ಣಾಜಿ ಜಗತಾಪ, ಮುದಕಪ್ಪ ಬಡಿಗೇರಿ, ಬಸವರಾಜ ಕಶೆಟ್ಟಿ, ಶಶಿಧರ ಡಿಸಲೆ, ಸಂಬಾಜಿ ವಾಡಕರ, ಮಂಜು ಶೆಟ್ಟಿ, ಹಸನ ಮನಗೂಳಿ, ಪ್ರಕಾಶ ಹಜೇರಿ, ಮಂಜೂರ ಬೇಪಾರಿ, ರಜಾಕ ಮಮದಾಪೂರ, ಸದ್ದಾಂ, ಬಿ.ಎನ್.ನಾಲಬಂದ, ಎಎಸ್‍ಐ ಎ.ಎಸ್.ನಾಯ್ಕೋಡಿ, ಕೆ.ಬಿ.ರಡ್ಡಿ, ಎಸ್.ಎಂ.ಪಡಶೆಟ್ಟಿ, ಸಿ.ಎಸ್.ಭಂಗಿ, ಸಿಬ್ಬಂದಿಯವರಾದ ಗೀರಿಶ ಚಲವಾದಿ, ಎಚ್.ಕೆ.ಕುಂಟೋಜಿ, ಆರ್.ಎಚ್.ದೊಡಮನಿ, ಬಸವರಾಜ ಕಳ್ಳಿಗುಡ್ಡ, ಸಂಗಮೇಶ ಚಲವಾದಿ, ಸೈಫನ್ ಕುರಿ, ವ್ಹಿ.ಎಸ್.ಸಜ್ಜನವರ, ಎಂ.ಎಲ್.ಪಟ್ಟೇದ, ಮೊದಲಾದವರು ಇದ್ದರು.