ನಾವು ಬದಲಾಗೋಣ, ಮಕ್ಕಳನ್ನು ಬದಲಿಸೋಣ

ವಿಜಯಪುರ,ಸೆ೧೩:ಸನಾತನ ಧರ್ಮ ಪರಂಪರೆ ವೇದ ನಿಶೋಪತ್ತುಗಳ ವಿಷಯದಲ್ಲಿ ಹಿರಿಯರು ಆದರ್ಶ ಪ್ರಾಯವಾಗಿದ್ದರೆ ಮಾತ್ರ ಈಗಿನ ಪೀಳಿಗೆ ಅನುಸರಿಸುತ್ತದೆ. ಹೀಗಾಗಿ ಮೊದಲು ನಾವು ಬದಲಾಗಬೇಕು. ನಮ್ಮ ಮಕ್ಕಳನ್ನು ತಿದ್ದುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮೇಲುಕೋಟೆ ಯದುಗಿರಿ ಯತಿರಾಜ ಮಠದ ಶ್ರೀ ಡಾಕ್ಟರ್ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಗಳು ಹೇಳಿದರು.
ಇವರು ಪಟ್ಟಣದ ಬ್ರಾಹ್ಮಣ ಸೇವಾ ಟ್ರಸ್ಟ್ ನಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರಧಾನ ಮಾಡಿರುವ ಪ್ರಯುಕ್ತ ಬ್ರಾಹ್ಮಣ ಸಂಘದವರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಚಾತುರ್ಮಾಸದ ಅಂತಿಮ ಸೇವೆಯನ್ನು ಶ್ರೀ ಚನ್ನಕೇಶವಸ್ವಾಮಿರವರಿಗೆ ಅರ್ಪಿಸಿ, ಮಾತನಾಡಿದರು.
ವಿಜಯಪುರ ಒಂದು ವಿಶಿಷ್ಟವಾದ ನಗರವಾಗಿದ್ದು, ಇದಕ್ಕೆ ತನ್ನದೇ ಆದ ಇತಿಹಾಸವಿದ್ದು, ಇತಿಹಾಸದಲ್ಲಿ ವೇದಗಾನಪುರಿ ಎಂದೇ ಪ್ರಸಿದ್ಧವಾಗಿರುವ ವಿಜಯಪುರವು ಕೈವಾರ ನಾರಾಯಣ ತಾತಯ್ಯರವರು ತಮ್ಮ ಪುಸ್ತಕದಲ್ಲಿ ಬರೆದಿರುವ ನಾಮಾಂಕಿತಗಳಿಂದ ಸಾಕ್ಷಿಯಾಗಿದೆ. ಎಂದು ಹೇಳಿದರು.
ಶ್ರೀ ಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾಕ್ಟರ್ ಎಂ.ಆರ್ ಜಯರಾಮ್ ಮಾತನಾಡಿ, ಸನಾತನ ಪರಂಪರೆ ಹೊಂದಿರುವ ದೇಶದಲ್ಲಿ, ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿ ಉಳಿಯಬೇಕೆಂದು ಅರಿವು ಮೂಡಿಸಬೇಕಾಗಿದೆ ಹಾಗೂ ಜಗತ್ತಿನ ಎಲ್ಲಾ ದುಷ್ಟ ಶಕ್ತಿಗಳು ಸೇರಿಕೊಂಡು ಅತ್ಯಂತ ಸನಾತನ ಪರಂಪರೆ ಎನಿಸಿರುವ ಹಿಂದೂ ಧರ್ಮದ ನಾಶಮಾಡಲು ಷಡ್ಯಂತರ ನಡೆಸುತ್ತಿವೆ. ಇದಕ್ಕೆ ನಾವು ಎಚ್ಚರಿಕೆಯಿಂದ ಇರಬೇಕು ನಮ್ಮ ಧರ್ಮ ಕಲೆ ಸಂವೇದನೆಯನ್ನು ಉಳಿಸಿ ರಕ್ಷಿಸಬೇಕಾದ ಹೊಣೆ ನಮ್ಮೆಲ್ಲರದಾಗಿದೆ. ಕೈವಾರ ತಾತಯ್ಯನವರಿಗೂ ಮತ್ತು ರಾಮಾನುಜರಿಗೂ ಇಲ್ಲಿನ ಭಾವ ಸಂಬಂಧವಿದ್ದಂತೆ ತಾತಯ್ಯನವರು ರಾಮಾನುಜರ ದಾರಿಯಲ್ಲೇ ನಡೆದಿದ್ದಾರೆ. ರಾಮಾನುಜರು ದೇಶದ ಧೀಮಂತ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಬ್ರಾಹ್ಮಣ ಸೇವಾ ಟ್ರಸ್ಟ್ ಅಧ್ಯಕ್ಷ ಮುರಳಿ ಭಟ್ಟಾಚಾರ್ಯ ಹಾಗೂ ಗೌರವಾಧ್ಯಕ್ಷ ಡಾಕ್ಟರ್ ಸತ್ಯ ಪ್ರಸಾದ್, ಉಪಾಧ್ಯಕ್ಷ ಶೇಷಗಿರಿ ರಾವ್, ಹಾಗೂ ಸಂಘದ ಪದಾಧಿಕಾರಿಗಳು ಯತಿರಾಜ ನಾರಾಯಣ ರಾಮಾನುಜುಯರ್ ಸ್ವಾಮೀಜಿ ಹಾಗೂ ಎಮ್.ಆರ್ ಜಯರಾಮರವರನ್ನು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸೇವಾ ಟ್ರಸ್ಟ್ ಸೂರ್ಯನಾರಾಯಣ ಬಾಬು, ಸತೀಶ್ ಕುಮಾರ್, ರವಿ ಕುಮಾರ್, ಚಂದ್ರಮೌಳಿ, ವೀಣಾ, ಪ್ರಕಾಶ್, ಇನ್ನು ಅನೇಕ ಸಮುದಾಯದ ಮುಖಂಡರು ಹಾಗೂ ವಿಜಯಪುರದ ಬಾಲಾಜಿ ಸಮುದಾಯದ ಮುಖಂಡರು ಹಾಗೂ ಶ್ರೀ ಕೃಷ್ಣ ಸತ್ಸಂಗದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.