ನಾವು ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ

ಸೈದಾಪುರ:ಜೂ.6: ನಾವು ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸಿರ ನಮ್ಮನ್ನು ರಕ್ಷಿಸುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳಪ್ಪ ಅರಿಕೇರಿ ಅಭಿಪ್ರಾಯಪಟ್ಟರು.
ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ಭೂಮಿಯ ಮೇಲೆ ಜೀವವಿರುವ ಪ್ರತಿಯೊಂದು ಜೀವ ರಾಶಿಗೆ ಆಹಾರಕ್ಕಿಂತ ಮೊದಲು ಗಾಳಿ ಅತ್ಯಗತ್ಯವಾಗಿ ಬೇಕು. ಇಂದಿನ ಸ್ಥಿತಿಗತಿಯನ್ನು ನೋಡುತ್ತಿದ್ದರೆ ಗಿಡಗಳ ಮಹತ್ವದ ಅರಿವು ಉಂಟಾಗುತ್ತದೆ. ಪರಿಸರ ದಿನಾಚರಣೆ ಕೇವಲ ಸಸಿ ನೆಡುವ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ನೆಟ್ಟಿರುವ ಸಸಿಗಳನ್ನು ಪೋಷಣೆ ಮಾಡುವ ಕೆಲಸ ನಿರಂತರವಾಗಿ ಸಾಗಬೇಕಿದೆ. ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಈ ದಿದ ಮಹತ್ವವನ್ನು ಪ್ರತಿಯೊಬ್ಬ ವ್ಯೆಕ್ತಿಯೂ ತಿಳಿಯಬೇಕು. ಶಾಲೆಗಳಲ್ಲಿ ಸಣ್ಣ ತರಗತಿಗಳಿಂದಲೇ ಪಠ್ಯಗಳಲ್ಲಿ ಪರಿಸರದ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೌಲಾಲಿ ಐಕೂರು ಮಾತನಾಡಿ, ವಾತವರಣದಲ್ಲಿ ಮಾಲಿನ್ಯತೆಯನ್ನು ತಡೆಯಲು ಪರಿಸರ ಸಮತೋಲನ ಅತ್ಯಗತ್ಯವಾಗಿದ್ದು ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸುವಂತ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಅರ್ಜುನ ಚವ್ಹಾಣ, ಸಿದ್ದಲಿಂಗರಡ್ಡಿ ದೇಶಮುಖ್, ಪರ್ವತರೆಡ್ಡಿಗೌಡ, ಹಣಮಂತ, ಬಾಗ್ಲಿ, ಶರಣಪ್ಪ ಬೈರಂಕೊಂಡಿ, ಶರಣಪ್ಪ ಬಾಲಚೇಡ, ರಾಜು ದೊರೆ, ಮೌಲಾಲಿ ಬಾಲಚೇಡ, ಶಾಂತಪ್ಪ ರಾಂಪುರ, ಸೇರಿದಂತೆ ಸಿಬ್ಬಂದಿ ಇದ್ದರು.