ನಾವು ನಿಮ್ಮೋಂದಿಗಿದ್ದೇವೆ ಬಡ ಬ್ರಾಹ್ಮಣರು ಭಯಪಡಬೇಕಿಲ್ಲ: ಭರತ್ನೂರ

ಕಾಳಗಿ. ಜೂ.8 : ಸತತವಾಗಿ ಎರನೇ ವರ್ಷವೂ ಕೂಡ ಬೆಂಬಿಡದೆ ಬೆನ್ನು ಹತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತಿರುವ ಸಾವಿರಾರು ಜನ ಬಡ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಯನ್ನುಂಟಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಹಿಂದೂಳಿದ ಬಡ ಬ್ರಾಹ್ಮಣ ಕುಟುಂಬಗಳ ಸ್ಥಿತಿ ಅಧೋಗತಿಯಲ್ಲಿದೆ ಎಂದು ಕಾಳಗಿ ತಾಲೂಕು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಹಾಗೂ ರಾಜಾಪೂರ ಗ್ರಾಪಂ.ಸದಸ್ಯರೂ ಆದ ಸತ್ಯನಾರಾಯಣರಾವ್ ಭರತ್ನೂರ ತಿಳಿಸಿದರು.
ತಾಲೂಕಿನ ಭರತ್ನೂರ ಗ್ರಾಮದಲ್ಲಿ ಸೋಮವಾರ
ಬ್ರಾಹ್ಮಣ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರದಿಂದ
ಶ್ರೀ ಸಚ್ಚಿದಾನಂದಮೂರ್ತಿ ಜೀ ಹಾಗೂ ಜಗದೀಶ್ ಹುನಗುಂದ ಅವರ ಮಾರ್ಗದರ್ಶನದಲ್ಲಿ
ಸಂಕಷ್ಟದಲ್ಲಿರುವ ಬಡ ಬ್ರಾಹ್ಮಣ ಸಮುದಾಯದ ಕುಟುಂಬಗಳಿಗೆ ನಾವು ನಿಮ್ಮೊಂದಿಗಿದ್ದೇವೆ ಎಂಬ ಧ್ಯರ್ಯವನ್ನು ಕೊಡುವದರ ಜೊತೆಗೆ ಆಹಾರ ಕಿಟ್ ವಿತರಣೆ ಮಾಡಿ ಅವರು, ಮಾತನಾಡಿದರು.

ಆದಿ ಕಾಲದಲ್ಲಿ ಆರ್ಥಿಕವಾಗಿ ಚೆನ್ನಾಗಿರುವ ಬ್ರಾಹ್ಮಣ ಸಮೂದಾಯವು, ಆಧುನಿಕ ಕಾಲದಲ್ಲಿ ಅಧೋಗತಿ ಪರಿಸ್ಥಿತಿಯನ್ನುಂಟಾಗಿದೆ.
ಹಳೆಯ ಹೆಸರಿನಲ್ಲಿಯೇ ಬ್ರಾಹ್ಮಣ ಸಮೂದಾಯವು ಶ್ರೀ ಮಂತರೆನ್ನುವ ಪಟ್ಟದಲ್ಲಿಟ್ಟಿದ್ದಾರೆ. ಆದರೆ ವಾಸ್ತವ ಸಂಗತಿಯಲ್ಲಿ ಬಡತನರೇಖೆಗಿಂತ ಕೆಳಗಿರುವ ಸಾವಿರಾರು ಬ್ರಾಹ್ಮಣ ಕುಟುಂಬಗಳು ಬಡತನದ ಬವಣೆಯಲ್ಲಿಯೇ ಬಳಲುತ್ತಿದ್ದಾರೆ.
ಕಾರಣ ಸರ್ಕಾರ ಹೆಚ್ಚಿನ ಗಮನ ಹರಿಸಿ, ಆಧುನಿಕ ಕಾಲದಲ್ಲಿರುವ ಬಡ ಬ್ರಾಹ್ಮಣ ರ ಭಾವನೆಗಳಿಗೆ ಧಕ್ಕೆಯಾಗದಂತೆ ಈ ಕುಟುಂಬಗಳು ಆರ್ಥಿಕವಾಗಿ ಸದೃಢರಾಗಲು ಸದಾವಕಾಶ ಗಳು ಕಲ್ಪಿಸಿಕೊಂಡುವಂತೆ ತಾಕಿತು ಮಾಡಿದ ಅವರು, ಕೋವಿಡ್-19, ಎರಡನೇ ಅಲೆಗೆ ತತ್ತರಿಸಿದ ನಮ್ಮ ಸಮಾಜದ ಅನೇಕ ಯುವಕರು, ಖಾಸಗಿ ಕಂಪನಿಗಳು ಹಾಗೂ ಖಾಸಗಿ ಶಾಲೆ ಕಾಲೇಜುಗಳಲ್ಲಿ ನಿರ್ವಹಿಸುತ್ತಿದ್ದ ಕೆಲಸಗಳನ್ನೂ ಕಳೆದುಕೊಂಡು ತುಂಬಾ ಸಂಕಷ್ಠಗಳನ್ನು ಅನುಭವಿಸುವಂತಾಗಿದೆ. ಈ ಕುಟುಂಬಗಳಿಗೂ ಸೂಕ್ತ ಉದ್ಯೋಗ ಕಲ್ಪಿಸುವ ಕಾರ್ಯ ಸರ್ಕಾರ ಮಾಡಬೇಕಾದ ಗೊಂಡಿದೆ ಎಂದು ಒತ್ತಾಯಿಸಿ ದರು.
ಬಡ ಬ್ರಾಹ್ಮಣ ಕುಟುಂಬಗಳ ದೈನಂದಿನ ಉಪಯೋಗಕ್ಕಾಗಿ ಬಳಕೆಯಾಗುವಂತಹ ಗೃಹೋಪಯೋಗಿ ವಸ್ತುಗಳಾದ ಅಕ್ಕಿ,ಗೋದಿ, ಎಣ್ಣೆ, ಬೆಲ್ಲಾ, ಜೋಳದ ಹಿಟ್ಟು, ಉಪ್ಪು, ಖಾರಾ, ಹುಣಸೆ ಹಣ್ಣು, ತುಪ್ಪ, ಸಾಬೂನು, ಚಾಹಾಪುಡಿ ಸೇರಿದಂತೆ ವಿವಿಧ ದಿನಸಿ ಕಿಟ್ ಗಳನ್ನು ನೀಡಿ ತಾವು ಯಾವುದಕ್ಕೂ ಭಯಪಡಬೇಡಿ ನಾವು ನಿಮ್ಮೋಂದಿಗಿದ್ದೇವೆ ಎಂಬ ಪುಷ್ಟಿಯನ್ನು ನೀಡಿದರು.

  ಕಾಳಗಿ ತಾಲ್ಲೂಕ ಬ್ರಾಹ್ಮಣ ಸಮಾಜದ ಹಿರಿಯರಾದ ರಮಾಕಾಂತ ಕುಲಕರ್ಣಿ, ಭಂಡು ಕುಲಕರ್ಣಿ, ಚಂದ್ರಕಾಂತ ಗ್ರಾಮಜೋಷಿ ಕಾಳಗಿ, ಕಲ್ಯಾಣ ಭಟ್ ಮಹಾರಾಜ, ಲಕ್ಷ್ಮೀಕಾಂತ ಜೋಷಿ ಕೋಡ್ಲಿ, ಹಣಮಂತರಾವ ಕುಲಕರ್ಣಿ ಕೊಡದೂರ, ಅನೀಲ ಜೋಷಿ ಕೋರವಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.