ನಾವು ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ – ಸಿದ್ದಯ್ಯ ಸ್ವಾಮಿ ಚೇಗುಂಟ

ರಾಯಚೂರು.ನ.22- ನಗರದ ಕನ್ನಡ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಜಾನಪದ ಪರಿಷತ್ ರಾಯಚೂರು ವತಿಯಿಂದ ತಾಲೂಕಾ ಕನ್ನಡ ಜಾನಪದ ಪರಿಷತ್‌ನ ಪದಗ್ರಹಣ ಹಾಗೂ ರಾಜ್ಯದಲ್ಲಿ ಪ್ರಥಮ ಮಹಿಳಾ ಜಾನಪದ ಪರಿಷತ್ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ವೇದಿಕೆಯ ಮೇಲೆ ವಿರಾಜಮಾನರಾದ ಸರ್ವ ಗಣ್ಯರೊಂದಿಗೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಪ್ರಥಮ ಕನ್ನಡ ಜಾನಪದ ಮಹಿಳಾ ಘಟಕವಾಗಿ ರಚನೆಯಾಗಿದ್ದು ನನಗೆ ತುಂಬ ಖುಷಿ ತಂದಿದೆ ಹಾಗೂ ಕನ್ನಡ ಜಾನಪದ ಪರಿಷತ್‌ನ ತಾಲೂಕಾಧ್ಯಕರಾಗಿ ಸಿದ್ದಯ್ಯ ಸ್ವಾಮಿ ಚೇಗುಂಟಾರವರು ಆಯ್ಕೆಯಾಗಿರುವುದು ನನಗೆ ಇನ್ನೂ ಖುಷಿ ತಂದಿದೆ ಎಂದು ಹೇಳಿದರು.
ಯಾಕೆಂದರೆ ತಾಲೂಕಾಧ್ಯಕ್ಷರ ಸ್ಥಾನ ಯಾವ ವ್ಯಕ್ತಿಗೆ ವಲಿಯಬೇಕಾಗಿರುತ್ತೋ ಆ ಕನ್ನಡಾಂಭೆ ನಿರ್ಣಯಿಸಿ ಬಿಟ್ಟಿರುತ್ತಾಳೆ. ಈ ವ್ಯಕ್ತಿಯಿಂದಲೇ ನನ್ನ ಕನ್ನಡ ಜಾನಪದ ಬೆಳೆದು ಲೋಕಾರ್ಪಣೆಗೊಳ್ಳಬೇಕೆಂದು ಆ ಮಹಾಮಾತೆಯ ಪ್ರೇರಣೆಯಾಗಿರುತ್ತೆ. ನಾವು ಅಧಿಕಾರ ಕೊಡುವವರು ಸಾಂಕೇತಿಕವಸ್ಟೇ ಎಂದು ಸಿದ್ದಯ್ಯ ಸ್ವಾಮಿಯವರ ಆಯ್ಕೆ ತುಂಬ ಶ್ಲಾಘನೀಯವೆಂದರು. ನಂತರ ಜಿಲ್ಲಾಧ್ಯಕ್ಷರಾಗಿ ದಾನಮ್ಮ ಸುಭಾಸ್ ಚಂದ್ರ ಕಡಗಂಚಿಯವರು ಅಧಿಕಾರ ಸ್ವೀಕಾರ ಮಾಡಿದರು.
ರೇಖಾ ಕೇಶವರೆಡ್ಡಿಯವರು ಅಧಿಕಾರ ಸ್ವೀಕರಿಸಿದರು ಹಾಗೂ ಇನ್ನುಳಿದ ಸರ್ವ ಪದಾಧಿಕಾರಿಗಳು ತಮ್ಮ ತಮ್ಮ ಕ್ಷೇತ್ರಗಳ ಅಧಿಕಾರವನ್ನು ಸ್ವೀಕರಿಸಿದರು. ‌‌ನಂತರ ಚೇಗುಂಟ ಸಿದ್ದಯ್ಯ ಸ್ವಾಮಿಯವರು ರಾಜ್ಯಾಧ್ಯರಾದ ಡಾ.ಎಸ್.ಬಾಲಾಜಿಯವರಿಗೆ ವೇದಿಕೆಯ ಮೇಲೆ ಸರ್ವ ಗಣ್ಯರೊಂದಿಗೆ ಗೌರವ ಸನ್ಮಾನ ಮಾಡಿ “ಶ್ರೀಕುಮಾರ ಕಲ್ಪವೃಕ್ಷ” ಎಂಬ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ, “ವೀರಶೈವ ಲಿಂಗಾಯತ ಒಂದು” “ವಿಶ್ವವೇ ನಮ್ಮ ಬಂಧು” ಎಂಬ ಧರ್ಮಪ್ರಚಾರಕ್ಕೆ ಮುನ್ನುಡಿ ಬರೆದರು.
ಇಲ್ಲಿಯ ವರೆಗೆ ಸುಮಾರು ವರ್ಷಗಳಿಂದ ಸಾವಿರಕ್ಕೂ ಹೆಚ್ಚುಜನ ಧರ್ಮಾಭಿಮಾನಿಗಳಿಗೆ ತಮ್ಮದೇ ಸ್ವಂತ ದುಡಿಮೆಯ ಹಣದಿಂದ ಭಾವಚಿತ್ರವನ್ನು ಮಾಡಿಸಿ ಧರ್ಮ ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ನೂತನ ತಾಲೂಕಾಧ್ಯಕ್ಷರಿಗೆ ನಾದಲೋಕ ಕಲಾಬಳಗದ ವತಿಯಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ವೇದಿಕೆಯ ಸಾನಿಧ್ಯವನ್ನು ವಹಿಸಿದ್ದ ಉಭಯ ಶ್ರೀಗಳ ಅಮೃತ ಹಸ್ತದಿಂದ ರಾಘವೇದ್ರ ಆಶಾಪೂರು ಇವರ ನೇತೃತ್ವದಲ್ಲಿ ಸಿದ್ದಯ್ಯ ಸ್ವಾಮಿ ಚೇಗುಂಟಾ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮವೂ ಜರುಗಿತು.
ನಂತರ ಮಾತನಾಡಿದ ಚೇಗುಂಟಾ ಸ್ವಾಮಿಯವರು “ವೀರಶೈವ ಲಿಂಗಾಯತ ಒಂದು… ವಿಶ್ವವೇ ನಮ್ಮ ಬಂಧು…” ಎಂಬ ನಾಣ್ಣುಡಿಯಂತೆ ಸರ್ವರು ಧರ್ಮವನ್ನು ಕಾಪಾಡಬೇಕು ಧರ್ಮವಿಲ್ಲದೇ ಮಾನವನಿಲ್ಲ ಮಾನವನಿಲ್ಲದೇ ಧರ್ಮವಿಲ್ಲ ಎಂದು ಹೇಳಿದರು. ಮಾತು ಬಾರದ ಗಿಡ ಮರಗಳು ಮತ್ತು ಪ್ರಾಣಿ ಪಕ್ಷಿಗಳು ತಮ್ಮ ಧರ್ಮವನ್ನು ದಿನನಿತ್ಯವೂ ಶಿರಸಾಪಾಲಿಸುತ್ತಾ ಬರುತ್ತಿವೆ.
ಆದರೆ, ಮಾತನಾಡಲು ಬರುವಂತ ಮತ್ತು ಸರ್ವವನ್ನು ಅರಿತಿರುವಂತ ಮಾನವನಿಗೇಕಿಲ್ಲ ಧರ್ಮಪಾಲನೆಯ ಬುದ್ದಿ ಎಂದು ಹೇಳಿದರು. ಆದುದರಿಂದ ಸರ್ವರೂ ನಿಮ್ಮ ಸಮಯಕ್ಕೆ ತಕ್ಕಂತೆ ಧರ್ಮವನ್ನು ಕಾಪಾಡಿ ಅದೇ ಧರ್ಮ ಇಂದಿಲ್ಲಾ ನಾಳೆ ನಿಮ್ಮನ್ನೂ ಕಾಪಾಡಬಲ್ಲದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಸರ್ವ ಪದಾಧಿಕಾರಿಗಳು, ದೇವಸ್ಥಾನದ ಸದ್ಭಕ್ತರು, ಸಂಗೀತ ಪಾಠ ಶಾಲೆಗಳ ಸರ್ವ ಶಿಷ್ಯಂದಿರು, ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.