ನಾವದಗಿಯಲ್ಲಿ 1ತಿಂಗಳಲ್ಲಿ ಬರೋಬ್ಬರಿ 20 ಜನರ ನಿಗೂಢ ಸಾವು

ಬೀದರ:ಮೇ.19: ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ಒಂದೇ ತಿಂಗಳಿನಲ್ಲಿ 20 ಜನ ಸಾವು : ಕಾರಣ ನಿಗೂಢ.

ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ನ ಅಬ್ಬರ ಜೋರಾಗಿದೆ.

ಪ್ರತಿ ದಿನ ನೂರಾರು ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ನಿಗೂಢ ಸಾವುಗಲಾಗುತ್ತಿವೆ.

ಈ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ 20 ಜನ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಗ್ರಾಮದ ಜನರು ಕೊರೊನಾ ಮಹಾಮಾರಿಗೆ ಸಾವನ್ನಪ್ಪುತ್ತಿದ್ದಾರಾ? ಇಲ್ಲವೇ ಯಾವ ಕಾರಣಕ್ಕಾಗಿ ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ತಿಳಿಯದೇ ಜನರು ಗೊಂದಲಗೊಂಡಿದ್ದಾರೆ.

ಗ್ರಾಮದಲ್ಲಿ ಸರಣಿ ಸಾವುಗಳಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು ಗ್ರಾಮದಲ್ಲಿ ನಿಗೂಢವಾಗಿ ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ತಿಳಿಯಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಟೆಸ್ಟಿಂಗ್ ಇಂದು ಮುಂದಾಗಿದ್ದಾರೆ.