
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.11: ಜೆಡಿಎಸ್ ಪಕ್ಷದ ಎರಡನೇ ಪಟ್ಟಿ ನಾಳೆ ಎ.12 ರಂದು ಘೋಷಣೆ ಮಾಡಲಿದೆಂದು ಜೆಡಿಎಸ್ ನಾಯಕ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅವರು ನಿನ್ನೆ ನಗರದಲ್ಲಿ ಪಂಚರತ್ನ ಯಾತ್ರೆ ಮುಗಿದ ನಂತರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿತ್ತು. ಈಗ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದೆಂದು ಹೇಳಿದರು.
ಎರಡನೇ ಪಟ್ಟಿ ವಿಳಂಬವಾಗಲು ಹಾಸನ ಟಿಕೆಟ್ ಕಸರಣವಲ್ಲ. ಹಾಸನ ವಿಚಾರದಲ್ಲಿ ಕಠಿಣ ಎನ್ನುವದೇನಿಲ್ಲ ಕಾರ್ಯಕರ್ತರ ಭಾವನೆ ಮೇರೆಗೆ ಟಿಕೆಟ್ ಘೋಷಣೆ ಮಾಡಲಿದೆ ಎಂದರು.
ಶಕುನಿಗಳು:
ಮನೆ ಹಾಳು ಮಾಡೋ ಶಕುನಿಗಳು ಹಾಸನದಲ್ಲಿ ಇದ್ದಾರೆ. ಶಕುನಿಗಳು ತಲೆ ಕಡೆಸುತ್ತಾರೆ ಏನು ಮಾಡಬೇಕು. ಕುರುಕ್ಷೇತ್ರ ಯುದ್ಧ ಕೂಡ ಶಕುನಿಯ ಕುತಂತ್ರದಿಂದ ನಡೆಯಿತು. ಈ ದೇಶದ ಮಣ್ಣಲ್ಲಿ ಹೀಗೆ ಇರೋದು ಏನು ಮಾಡೋಕೆ ಅಗಲ್ಲ. ಶಕುನಿಗಳು ನಮ್ಮ ಕುಟುಂಬದಲ್ಲಿ ಇಲ್ಲ, ಹಾಸನದಲ್ಲಿ ಇದ್ದಾರೆ. ಬೆಳಿಗ್ಗೆ ಯಿಂದ ಸಂಜೆವರೆಗೂ ತಲೆ ಕಡೆಸುತ್ತಾರೆ. ನಮ್ಮ ಪಕ್ಷದವರ ಜೊತೆಗೆ ಬೇರೆ ಪಕ್ಷದಲ್ಲಿ ಇದ್ದಾರೆ. ಅಭಿಮಾನಿಗಳು ಹಿತಚಿಂತಕರು ಬುದ್ಧಿಜೀವಿಗಳು ಹಿತ ಶತ್ರುಗಳು ತಲೆ ಕೆಡೆಸಿದ್ದಾರೆಂದರು.
ಸಾಮಾನ್ಯ ಕಾರ್ಯಕರ್ತ ಸಾಕು:
ರೇವಣ್ಣ ಹಾಸನ ಟಿಕೆಟ್ ವಿಚಾರ ದಲ್ಲಿ ಈವರೆಗೂ ಮಾತನಾಡಿಲ್ಲ. ಕದ್ದು ಮುಚ್ಚಿ ಮಾತನಾಡೋ ಅವಶ್ಯಕತೆ ಇಲ್ಲ ರೇವಣ್ಣವರಿಗೆ ಭಯ ಕಾಡ್ತಿದೆ, ಕಾರಣ ನನ್ನನ್ನು ಕನ್ವೇನ್ಸ್ ಮಾಡಬೇಕಲ್ವೇ ಎಂದರು.
ಕಾರ್ಯಕರ್ತರಿಗೆ ಕೊಡಬೇಕು ಎನ್ನುವದು ನನ್ನ ನಿಲುವು. ಆರೋಗ್ಯ ಲೆಕ್ಕಿಸದೇ ಪಕ್ಷ ಕಟ್ಡುತ್ತಿದ್ದೇನೆ. ಇದಕ್ಕೆ ಅಡ್ಡಗಾಲು ಹಾಕ್ತಿದ್ದಾರೆ. ಕೆಲ ವಿಷಯ ಹೇಳಿಕೊಳ್ಳಲು ಅಗಲ್ಲ ಎಂದರು.
ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎನ್ನುವುದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ದೇವೇಗೌಡರಿಗೂ ಸಹ ರೇವಣ್ಣ ಅವರನ್ನು ಕನಿವೇನ್ಸ್ ಮಾಡೋ ಶಕ್ತಿ ಇಲ್ಲದಾಗಿದೆ ಅದು ನಮ್ಮ ದುರದೃಷ್ಟ. ಈವರೆಗೂ ಈ ವಿಷಯದಲ್ಲಿ ರೇವಣ್ಣ ನನ್ನ ಜೊತೆಗೆ ಮಾತನಾಡಿಲ್ಲ. ಎಲ್ಲರಿಗೂ ಅಸೆ ಇರುತ್ತದೆ. ಹಾಸನದ ಬಿಜೆಪಿ ಅಭ್ಯರ್ಥಿ ಸೋಲಿಸಲು ನಮ್ಮ ಕುಟುಂಬದ ಅಭ್ಯರ್ಥಿ ಬೇಕಿಲ್ಲ ಸಾಮಾನ್ಯ ಕಾರ್ಯಕರ್ತ ಸಾಕು ಎಂದರು.
ನನ್ನ ಅಧ್ಯಕ್ಷತೆಯಲ್ಲಿ 59 ಸ್ಥಾನ ಗೆದ್ದಿದ್ದೆವು. ಅದೇ ದೊಡ್ಡದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ರು. ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಹೇಳಿದ್ರು. ಅದ್ರೇ ಹಿಂದೆ ಗೆದ್ದಿದ್ದ 59 ಸೀಟ್ ಈ ಬಾರಿ ಕ್ರಾಸ್ ಮಾಡ್ತೇನೆ. ಬಿಜೆಪಿ ಕಾಂಗ್ರೆಸ್ ಗಿಂತ ಹೆಚ್ಚು ಸ್ಥಾನ ಗೆಲ್ತೇವೆ. ಬಿಜೆಪಿ ಕಾಂಗ್ರೆಸ್ ನಿಂದ ಬರೋರಿಗೆ ಕಾಯ್ತೇವೆ ಎನ್ನುವ ಅವರು ಮಾಡೋ ಕೆಲಸವೇನು.ಅವರು ಇದೇ ಕೆಲಸ ಮಾಡೋದು ಎಂದು ಕೂಡ್ಲಿಗಿ ಕ್ಷೇತ್ರದ ಉದಾಹರಣೆ ಕೊಟ್ಟರು. ಕಾಂಗ್ರೆಸ್ ನವರೇ ನಮ್ಮವರನ್ನು ಕರೆದುಕೊಂಡು ಹೋದರೆಂದರು.
ಪಕ್ಷದ ಅಭ್ಯರ್ಥಿ ಮುನ್ನಾಬಾಯ್, ಮುಖಂಡರಾದ ಮೀನಳ್ಳಿ ತಾಯಣ್ಣ ಮೊದಲಾದವರು ಇದ್ದರು.