ನಾಳೆ 4 ಪುಸ್ತಕಗಳ ಬಿಡುಗಡೆ

ದಾವಣಗೆರೆ, ಡಿ.24 : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕ, ವೇದಗಂಗಾ ಪ್ರಕಾಶನ, ಗುಹೇಶ್ವರ ಪ್ರಕಾಶನ, ಚೈತನ್ಯ ಚಿಲುಮೆ ಪ್ರಕಾಶನ, ಶ್ರೀ ರಾಮ ಬುಕ್ ಸೆಂಟರ್ ಇವುಗಳ ಸಹಯೋಗದಲ್ಲಿ ನಾಳೆ (ಡಿ25)ರ ಬೆಳಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆ ಮಾಡಲಾಗುವುದು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಸಾಹಿತಿ ಓಂಕಾರಯ್ಯ ತವನಿಧಿ ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸುವರು. ಹಿರಿಯ ವಕೀಲ ಡಾ. ರೇವಣ್ಣ ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ. ಎಂ.ಜಿ. ಈಶ್ವರಪ್ಪ ಸಾಹಿತಿ ಪಿ.ಎಂ. ಸಿದ್ದಯ್ಯ ಅವರ ಜೀವದಾಯಿನಿ, ಎಂ.ವಿ.ವೀರಯ್ಯ ಅವರ ಸಾವಯವ ಬುತ್ತಿ, ಕೆ.ಪಿ. ದೇವೇಂದ್ರಯ್ಯ ಅವರ ಸ್ಥಾವರಕ್ಕಳಿವುಂಟು, ಜಿ.ಎಂ. ಹಿರೇಮಠ ಅವರ ಸಾಮಾನ್ಯ ಜ್ಞಾನ ನಿಧಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಪುಸ್ತಕಗಳ ಕುರಿತು ಸಾಹಿತಿ ಡಾ. ದಾದಾಪೀರ್ ನವೀಲೆಹಾಳ್, ಕೆ.ಎಸ್. ವೀರಭದ್ರಪ್ಪ ತೆಲಗಿ, ಜಿ. ಮುರಿಗಪ್ಪ ಗೌಡರು ಮಾತನಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಹಿರಿಯ ಸಾಹಿತಿ ಎಸ್.ಟಿ. ಶಾಂತ ಗಂಗಾಧರ ಭಾಗವಹಿಸಲಿದ್ದಾರೆ ಎಂದು ಹೇಳಿದರು.