ನಾಳೆ 3ನೇ ಹಂತದ ಲಸಿಕೆ ತಾಲೀಮು: ರಾಜ್ಯಗಳೊಂದಿಗೆ ಹರ್ಷವರ್ಧನ್ ಸಭೆ

ನವದೆಹಲಿ,ಜ.೭- ದೇಶಾದ್ಯಂತ ಜನವರಿ ೧೩ ಅಥವಾ ೧೪ ರಂದು ಕೊರೋನೊ ಸೋಂಕಿಗೆ ಲಸಿಕೆ ಹಾಕುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.

ಕೊರೋನೋ ಸೋಂಕಿಗೆ ಲಸಿಕೆ ಹಾಕುವುದಕ್ಕೂ ಮುನ್ನ ಎದುರಾಗಬಹುದಾದ ಸಮಸ್ಯೆಗಳನ್ನು ಪತ್ತೆ ಮಾಡಲು ನಾಳೆ ದೇಶಾದ್ಯಂತ ಮೂರನೆಯ ಕೋರೋನಾ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನಾಳಿನ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಅವರು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ನಾಳೆ ನಡೆಯಲಿರುವ ಲಸಿಕೆ ತಾಲೂಕು ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಂತೆ ರಾಜ್ಯಗಳ ಆರೋಗ್ಯ ಸಚಿವರುಗಳಿಗೆ ಹರ್ಷವರ್ಧನ್ ಹಲವು ಸಲಹೆ ನೀಡಿದ್ದಾರೆ

ಕಳೆದ ಹಲವು ದಿನಗಳಿಂದ ದೇಶದಲ್ಲಿ ಕರೋನಾ ವೈರಸ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು ಅದನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ಹೆಚ್ಚು ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡುವುದು ರಾಜ್ಯಗಳಿಗೆ ಸೂಚಿಸಿದ್ದಾರೆ.

ಲಸಿಕೆ ತಾಲೀಮು ವೇಳೆ ಎದುರಾಗುವ ಸಮಸ್ಯೆಗಳನ್ನು ಪತ್ತೆಹಚ್ಚಿ ದೇಶಾದ್ಯಂತ ಲಸಿಕೆ ಹಾಕುವ ಸಂದರ್ಭದಲ್ಲಿ ಆ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ರಾಜ್ಯದ ಆರೋಗ್ಯ ಸಚಿವರು ಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.

ಲಸಿಕೆ ತಾಲೀಮಿನ ವೇಳೆ ನೊಂದಣಿ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಬಾಕ್ಸ್

ಮುಖಗವಸು ಕಡ್ಡಾಯ:

ಕೊರೋನಾ ಸೋಂಕಿಗೆ ಅಭಿವೃದ್ಧಿಪಡಿಸಿರುವ ಲಸಿಕೆ ಶೇಕಡ ನೂರರಷ್ಟು ಖಾತರಿ ನೀಡಲು ಸಾಧ್ಯವಿಲ್ಲ ಆದರೂ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಮುಖಗವಸು ಧರಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಲಸಿಕೆ ಸಿದ್ಧವಾಗಿದೆ ಎನ್ನುವ ಉದಾಸೀನ ಜನರಲ್ಲಿ ಬೇಡ ಇನ್ನೂ ಕೆಲವು ತಿಂಗಳುಗಳ ಕಾಲ ಅಂದರೆ ೬ ರಿಂದ ಒಂದು ವರ್ಷ ಕನಿಷ್ಠ ಧರಿಸುವುದು ಕಡ್ಡಾಯ ಎಂದು ಅವರು ಸೂಚಿಸಿದ್ದಾರೆ.

೨೦೨೨ರ ಆರಂಭದಲ್ಲಿ ದೇಶದ ಎಲ್ಲ ಜನರಿಗೂ ಲಸಿಕೆ ಹಾಕುವ ಕಾರ್ಯ ನಡೆಯಬಹುದು ಎಂದು ಅಂದಾಜಿಸಿದ್ದಾರೆ