ನಾಳೆ 2ನೇ ಹಂತದ ಗ್ರಾಪಂ ಚುನಾವಣೆ

  • ಜಿಲ್ಲೆಯ 6 ತಾಲೂಕುಗಳಲ್ಲಿ ಮತದಾನ
  • ಬೆಳಿಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ
  • ಮತ ಪತ್ರಗಳಲ್ಲಿ ಮತದಾನ
  • ಡಿ 30 ರಂದು ಮತಗಳ ಎಣಿಕೆ
    ಬಳ್ಳಾರಿ,ಡಿ.26: ಜಿಲ್ಲೆಯ ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆ ಅಂಗವಾಗಿ ನಾಳೆ ಬಳಿಗ್ಗೆ 7 ರಿಂದ ಮತದಾನ ನಡೆಯಲಿದೆ.
    ಮತಗಟ್ಟೆ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್,ಸ್ಮಾರ್ಟ್ ವಾಚ್ ಹಾಗೂ ಇತರೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಉಪಯೊಗಿಸದಂತೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.