ನಾಳೆ ೬೮ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ

ಮುಂಬೈ,ಏ.೨೬- ಬಾಲಿವುಡ್‌ನ ಅತಿ ದೊಡ್ಡ ಪ್ರಶಸ್ತಿ ಒಂದಾದ ಬಹುನಿರೀಕ್ಷಿತ ೬೮ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶ ಪ್ರಕಟವಾಗಿದ್ದು ನಾಳೆ ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕೋವಿಡ್ ಸೋಂಕಿನಿಂದ ಕಳೆದ ಕಲೆವು ವರ್ಷದಿಂದ ರದ್ದಾಗಿದ್ದ ಫಿಲ್ಮ್ ಫೇರ್ ಈ ಬಾರಿ ವರ್ಣರಂಜಿತವಾಗಿ ನಡೆಯಲಿದ್ದು ಎಲ್ಲಾ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜನಪ್ರಿಯ ಪ್ರಶಸ್ತಿಗಳು, ವಿಮರ್ಶಕರ ಪ್ರಶಸ್ತಿಗಳು ಮತ್ತು ತಂತ್ರಜ್ಞರ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಪ್ರಕಟವಾಗಿದ್ದು ಅಸ್ಕರ್ ಪ್ರಶಸ್ತಿಗೆ ಸುತ್ತಿಗೆ ಪ್ರವೇಶಿಸಿದ್ದ ಬಧಾಯಿ ದೋ, ಭೂಲ್ ಭುಲೈಯಾ ೨, ಬ್ರಹ್ಮಾಸ್ತ್ರ ಭಾಗ -೧ ,ಶಿವ, ಗಂಗೂಬಾಯಿ ಕಥಿವಾಡಿ, “ದಿ ಕಾಶ್ಮೀರ್ ಫೈಲ್ಸ್ “ಮತ್ತು ಉಂಚೈ. ಚಿತ್ರಗಳು ಸೇರಿವೆ.
ಅತ್ಯುತ್ತಮ ನಿರ್ದೇಶಕರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ – ಅನೀಸ್ ಬಜ್ಮೀ (ಭೂಲ್ ಭುಲೈಯಾ ೨), ಅಯನ್ ಮುಖರ್ಜಿ -ಬ್ರಹ್ಮಾಸ್ತ್ರ ಭಾಗ ೧: ಶಿವ, ಹರ್ಷವರ್ಧನ್ ಕುಲಕರ್ಣಿ -ಬಧಾಯಿ ದೋ, ಸಂಜಯ್ ಲೀಲಾ ಬನ್ಸಾಲಿ- ಗಂಗೂಬಾಯಿ ಕಥಿವಾಡಿ, ಸೂರಜ್ ಆರ್. ಬರ್ಜತ್ಯಾ -ಉಂಚೈ, ಮತ್ತು ವಿವೇಕ್ ರಂಜನ್ ಅಗ್ನಿಹೋತ್ರಿ -ದಿ ಕಾಶ್ಮೀರ ಫೈಲ್ಸ್.
ಹಿರಿಯ ನಟ ಅಮಿತಾಬ್ ಬಚ್ಚನ್ ,ಅಜಯ್ ದೇವಗನ್ -ದೃಶ್ಯಂ ೨, ಅನುಪಮ್ ಖೇರ್ -ದಿ ಕಾಶ್ಮೀರ್ ಫೈಲ್ಸ್, ಹೃತಿಕ್ ರೋಷನ್ -ವಿಕ್ರಮ್ ವೇದಾ, ಕಾರ್ತಿಕ್ ಆರ್ಯನ್ -ಭೂಲ್ ಭುಲೈಯಾ ೨, ರಾಜ್‌ಕುಮಾರ್ ರಾವ್ -ಬಧಾಯಿ ದೋ ಜೊತೆಗೆ ಉಂಚೈಗಾಗಿ ಮತ್ತೊಂದು ಅತ್ಯುತ್ತಮ ನಟ ಪ್ರಶಸ್ತಿ ನಾಮನಿರ್ದೇಶಿತರಾಗಿದ್ದಾರೆ.
ಗಂಗೂಬಾಯಿ ಕಥಿಯಾವಾಡಿಯಲ್ಲಿನ ಆಲಿಯಾ ಭಟ್ ಅವರ ಏಕವ್ಯಕ್ತಿ ನಟನೆಯು ಭೂಮಿ ಪೆಡ್ನೇಕರ್ -ಬಧಾಯಿ ದೋ, ಜಾನ್ವಿ ಕಪೂರ್ -ಮಿಲಿ, ಕರೀನಾ ಕಪೂರ್ ಖಾನ್ -ಲಾಲ್ ಸಿಂಗ್ ಚಡ್ಡಾ, ಮತ್ತು ಟಬು -ಭೂಲ್ ಭುಲೈಯಾ ೨ ಅವರೊಂದಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ಕಣದಲ್ಲಿದ್ದಾರೆ.
ಇದಲ್ಲದೆ ಇನ್ನೂ ಹಲವು ವಿಭಾಗಳಲ್ಲಿ ತಂತ್ರಜ್ಞರು ನಾಮನಿರ್ದೇಶನಗೊಂಡಿದ್ದು ನಾಳೆ ರಾತ್ರಿ ಮುಂಬೈನಲ್ಲಿ ಪ್ರಶಸ್ತಿ ಯಾರಿಗೆ ಎನ್ನುವುದು ಅನಾವರಣವಾಗಲಿದೆ.