ರಾಯಚೂರು,ಮಾ.೨೫- ಶ್ರೀ ಬಜರಂಗ ಯುವ ಸೇನಾ ವತಿಯಿಂದ ೫ನೇ ವರ್ಷದ ಶ್ರೀರಾಮ ನವಮಿ ಉತ್ಸವ ಅಂಗವಾಗಿ ಶೋಭಾಯಾತ್ರೆಯನ್ನು ಮಾ.೨೬ ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಜರಂಗಿ ಯುವಸೇನಾ ಅಧ್ಯಕ್ಷ ಸಂತೋಷ ರೆಡ್ಡಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಶೋಭಾಯಾತ್ರೆಯು ಸಂಜೆ ೪ ಗಂಟೆಗೆ ನಡೆಯಲಿದ್ದು,ಯಾತ್ರೆಯು ಶ್ರೀ ಕೋದಂಡ ರಾಮಮಂದಿರದಿಂದ ಪ್ರಾರಂಭವಾಗಿ ನೇತಾಜಿ ನಗರ, ಶೆಟ್ಟಿಭಾವಿ ವೃತ್ತ,ತೀನ್ ಖಂಡಿಲ್ ವೃತ್ತ, ಬಟ್ಟೆ ಬಜಾರ್, ಮಹಾವೀರ ವೃತ್ತ, ಹರಿಹರ ರೋಡ್, ಚಂದ್ರಮೌಳೇಶ್ವರ ವೃತ್ತದಿಂದ ಶ್ರೀ ಆಂಜನೆಯ್ಯ ದೇವಸ್ಥಾನ ವರೆಗೆ ಯಾತ್ರೆ ಪಲುಪಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ರಾಮನ ವಿಗ್ರಹ, ಹನುಮಂತನ ವಿಗ್ರಹ, ಶಿವಾಜಿ ವಿಗ್ರಹ, ಭಾರತ ಮಾತೆಯ ಬಿಗ್ರಹ ಮತ್ತು ಕೇರಳದ ಚಂಡಿಮೇಳ, ಹನುಮಂತನ ವೇಷದಾರಿ, ಶಿವನ ವೇಷದಾರಿ ರಾಯಚೂರಿನ ಯುವ ರಾಮ ಭಕ್ತರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಪಾಲ ಕೊಠಾರಿ, ಎ.ರಾಮು, ಗೋವಿಂದ ರೆಡ್ಡಿ, ಉದಯಕುಮಾರ ಇದ್ದರು.