ನಾಳೆ ಹೊಸಪೇಟೆಯ ವಡಕರಾಯಸ್ವಾಮಿ ರಥೋತ್ಸವ


ಸಂಜೆವಾಣಿ ವಾರ್ತೆ
ಹೊಸಪೇಟೆ ವಿಜಯನಗರ, ಮೇ.22: ನಾಳೆ ಹೊಸಪೇಟೆಯ ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀವಡಕರಾಯ ಹಾಗೂ ರಂಗನಾಥಸ್ವಾಮಿ ರಥೋತ್ಸವ ಜರುಗಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಹಿಂದೂ ದಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನ ತನ್ನದೆ ಆದ ಇತಿಹಾಸನವನ್ನು ಹೊಂದಿದೆ. ಕಳೆ ಒಂದು ವಾರದಿಂದ ವಿವಿಧ ವೈವಿದ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿದ್ದ ಇಂದು ಬ್ರಹ್ಮರಥೋತ್ಸವ ಅತ್ಯಂತ ಶ್ರದ್ಧಾಭಕ್ತಿ ಸಂಭ್ರಮದಿಂದ ನಡೆಯಿತು. ಮಂಗಳವಾರ ಸೀತಾರಾಮ ಕಲ್ಯಾಣೋತ್ಸವಕ್ಕೆ ಅನೇಕ ದಂಪತಿಗಳು ಸಾಕ್ಷಿಯಾದರು. ಬೆಳಿಗ್ಗೆ ಯಿಂದಲೇ ಸ್ವಾಮಿಗೆ ವಿಶೇಷ ಪೂಜೆ, ಹಾಗೂ ಬ್ರಹ್ಮರಥೋತ್ಸವ ಯುವಕರು, ಬಾಲಕರು ಪಾಲ್ಗೊಂಡು ಯಶಸ್ವಿಗೊಳಿಸಿದರು. ಮಡಿವಸ್ತ್ರಗಳನ್ನು ತೊಟ್ಟು ಜೈ ಭಜರಂಗಬಲಿಕೀ ಜೈಯ ಎನ್ನವುದು ವಿಶೇಷವಾಗಿತು.
ನಾಳೆ ರಥೋತ್ಸವ:
ನಾಳೆ ಪೂರ್ಣಿಮೆಯ ಶುಭ ಮುಹೂರ್ತದಂದು ಬೆಳಿಗ್ಗೆ ರಥಾಂಗಹೋಮ ಹಾಗೂ ಮಡಿತೇರು ಕಾರ್ಯಕ್ರಮ ಮತ್ತು ಸಂಜೆ 4.30ಕ್ಕೆ ರಥೋತ್ಸವ ಜರುಗಲಿದೆ. ಜಾತ್ರಾಮಹೋತ್ಸವದ ಪ್ರಯುಕ್ತ ದೇವಸ್ಥಾನ ಹಾಗೂ ಸುತ್ತಲೂ ಸಂಘ ಸಂಸ್ಥೆಗಳು ಸೇರಿದಂತೆ ಅನೇಕರು ತೀರ್ಥಪ್ರಸಾದ್ ಹಾಗೂ ಅನ್ನ ಸಂತರ್ಪಣೆಯನ್ನು ಸಹ ಆಯೋಜಿಸಿದ್ದು ವಿಶೇಷವಾಗಿದೆ.