ನಾಳೆ ಹೊಸಪೇಟೆಯಲ್ಲಿ 67 ನೇ ಸಹಕಾರ ಸಪ್ತಾಯಕ್ಕೆ ಚಾಲನೆ

ಹೊಸಪೇಟೆ ನ 18 : ಅಖಿಲ ಭಾರತ ಸಹಕಾರ ಸಪ್ತಾಹದ 67ನೇ ರಾಜ್ಯ ಮಟ್ಟದ ವರ್ಷಾಚರಣೆ ಕಾರ್ಯಕ್ರಮ ಈ ಬಾರಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದು. ನಾಳೆ ಇದಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ನಿನ್ನೆ ನಗರದಲ್ಲಿ ಬಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ ಅವರು ವಿವರಣೆ ನೀಡಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು
ಈ ಬಾರಿ ಕೊರೋನಾ ಸೋಂಕು-ಆತ್ಮ ನಿರ್ಭರ ಭಾರತ ಸಂಸ್ಥೆಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಅಧ್ಯಕ್ಷತೆವಹಿಸಲಿದ್ದು. ಸಹಕಾರ ವಿಶೇಷ ಸಂಚಿಕೆಯನ್ನು ಸಮಾಜ ಕಲ್ಯಾಣ ಸಚಿವ ಬಿ. ರಾಮುಲು ಬಿಡುಗಡೆ ಮಾಡಲಿದ್ದು. ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ.
ಸಪ್ತಾಹದ ಏಳು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ಸಮಾಲೋಚನೆ ಮತ್ತು ಚರ್ಚೆಗಳು ನಡೆಯುತ್ತವೆ.
ಸಪ್ತಾಹದಲ್ಲಿ ಸಹಕಾರ ಸಂಸ್ಥೆಯಲ್ಲಿ ಸರ್ಕಾರದ ಯೋಜನೆಗಳ ಸೌಲಭ್ಯಗಳ ಕುರಿತಂತೆ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.
ಕಾರ್ಯಕ್ರಮದ ಮೊದಲ ದಿನ ನ 19 ರಂದು ಬೆಳಗ್ಗೆ 9ಕ್ಕೆ ಹೊಸಪೇಟೆ ನಗರದ ವಡಕರಾಯ ದೇವಸ್ಥಾನದಿಂದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಚೇರಿಯ ರಸ್ತೆಯ ಮೂಲಕ ಮುನ್ಸಿಪಲ್ ಮೈದಾನದವರೆಗೂ 108 ಎತ್ತಿನ ಬಂಡಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿ ಎತ್ತಿನಬಂಡಿಗೆ 2500 ಪ್ರೋತ್ಸಾಹ ಧನ ಹಾಗೂ ಉತ್ತಮವಾಗಿ ಅಲಂಕಾರಗೊಳಿಸಿದ ಎತ್ತುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಎಂದು ಕ್ರಮವಾಗಿ 25,15 ಹಾಗೂ 10 ಸಾವಿರ ಬಹುಮಾನವನ್ನು ವಿತರಿಸಲಿದೆ.
ಕಾರ್ಯಕ್ರಮವನ್ನು ಕೊವಿಡ್19 ಶಿಷ್ಠಾಚಾರ ಪ್ರಕಾರ ಆಯೋಜಿಸಲಾಗಿದ್ದು 250 ಜನರಿಗೆ ಮಾತ್ರ ಆಹ್ವಾನಿತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್, ಬಿಡಿಸಿಸಿ ಉಪಾಧ್ಯಕ್ಷ ಕೆ. ತಿಪ್ಪೇಸಾಮಿ, ನಿರ್ದೇಶಕ ಎಲ್.ಎಸ್.ಆನಂದ್,
ಬಳ್ಳಾರಿ ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕರು ನಾಗರಾಜ್ ಬಿಕೆ, ಶರಣಬಸಪ್ಪ ಲಿಯಾಕತ್ ಅಲಿ ಮೊದಲಾದವರು ಇದ್ದರು. ಇದ್ದರು.