ನಾಳೆ ಹೊಸಪೇಟೆಗೆ ಪ್ರಧಾನಿ ಮೋದಿ ಭದ್ರತೆಗಾಗಿ ಸೇನೆಯಿಂದ ವೈಮಾನಿಕ ಸಮೀಕ್ಷೆ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಏ.27:: ಪ್ರಧಾನಿ ನರೇಂದ್ರ ಮೋದಿ ನಾಳೆ  ಏ.28ರ ಭಾನುವಾರ ಸಂಜೆ ಹೊಸಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಭದ್ರತೆಗಾಗಿ ಸೇನಾಧಿಕಾರಿಗಳು ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿದರು.
ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿರುವ ಎಸ್‍ಪಿಜಿ ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಏರ್‍ಫೋರ್ಸ್‍ನ ಎರಡು ಹೆಲಿಕಾಪ್ಟರ್‍ಗಳು ಶುಕ್ರವಾರ ಮಧ್ಯಾಹ್ನದವರೆಗೆ ನಾಲ್ಕೈದು ಬಾರಿ ಆಗಸದಿಂದಲ್ಲಿ ಗಸ್ತು ತಿರುಗಿದವು.
ಹೊಸಪೇಟೆ ನಗರ, ತುಂಗಭದ್ರಾ ಡ್ಯಾಂ ಹಾಗೂ ತುಂಗಭದ್ರಾ ನದಿ ಸೇರಿದಂತೆ ಹೊಸಪೇಟೆ ನಗರದ ಸುತ್ತಲಿನ 10 ಕಿ.ಮೀ. ದೂರದವರೆಗೂ ಆಗಸದಲ್ಲಿ ಸಮೀಕ್ಷೆ ನಡೆಸಿತು. ಪ್ರಮುಖವಾಗಿ ಗುಡ್ಡ, ಬೆಟ್ಟ, ಅರಣ್ಯದ ಬಗ್ಗೆಯೂ ಸೇನಾಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
@12bc = ವಾಹನಗಳ ಮಾರ್ಗ ಬದಲಾವಣೆ:
ಅದರೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಭದ್ರತೆಯಲ್ಲಿ ತೊಡಗಿದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಸುಗಮ ಸಂಚಾರಕ್ಕಾಗಿ ಏ.28 ರಂದು ನಗರಕ್ಕೆ ಆಗಮಿಸುವ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ವಾಹನಗಳ ಸಂಚಾರದಲ್ಲಿ ಕೆಲ ಬದಲಾವಣೆ ಮಾಡಿದೆ. ಬೆಂಗಳೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಕಡೆಯಿಂದ ಹೊಸಪೇಟೆಗೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ವಿರುಪಾಕ್ಷ ನಾಯಕ ವೃತ್ತ, ಎ.ಪಿ.ಎಂ.ಸಿ ಸರ್ಕಲ್, ವಾಲ್ಮೀಕಿ ಸರ್ಕಲ್, ರಾಮಾ ಸರ್ಕಲ್, ಸ್ವಾಗಿ ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಸಾಗುವಂತೆ ಸೂಚಿಸಿದೆ.
ಹೊಸಪೇಟೆಯಿಂದ ಬೆಂಗಳೂರು ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಸಂಡೂರು ಕಡೆಗೆ ತೆರಳು ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಸಿಎಂಸಿ ಸರ್ಕಲ್, ವಾಲ್ಮೀಕಿ ಸರ್ಕಲ್, ಸಂಡೂರು ಬೈಪಾಸ್ ಮಾರ್ಗದಲ್ಲಿ ತೆರಳಬೇಕು. ಸಂಡೂರು ಕಡೆಯಿಂದ ಬರುವ ಬಸ್‍ಗಳು ವಾಲ್ಮೀಕಿ ಸರ್ಕಲ್, ರಾಮಾ ಸ್ವಾಗಿ ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು.
ಕೊಪ್ಪಳ ಕಡೆಯಿಂದ ಬರುವ ಬಸ್‍ಗಳು ಸಾಯಿಬಾಬಾ ವೃತ್ತ, ಎ.ಪಿ.ಎಂ.ಸಿ ಸರ್ಕಲ್, ವಾಲ್ಮೀಕಿ ಸರ್ಕಲ್, ರಾಮಾ ಸರ್ಕಲ್ ಸ್ವಾಗಿ ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು. ಕೊಪ್ಪಳ ಕಡೆಗೆ ಹೋಗುವ ವಾಹನಗಳು ಬಸ್ ನಿಲ್ದಾಣದಿಂದ ಸಿ.ಎಂ.ಸಿ ರಾಮ ಸರ್ಕಲ್, ವಾಲ್ಮೀಕಿ ಸರ್ಕಲ್, ಎ.ಪಿ.ಎಂ.ಸಿ ಸರ್ಕಲ್ ಗುರು ಕಾಲೇಜ್ ಕ್ರಾಸ್, ವಿರುಪಾಕ್ಷ ನಾಯಕ ವೃತ್ತ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.
@12bc = ಐದು ಕಡೆ ಪಾರ್ಕಿಂಗ್ ವ್ಯವಸ್ಥೆ:
ಬೆಂಗಳೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ ಕಡೆಯಿಂದ ಸಾರ್ವಜನಿಕರನ್ನು ಕರೆ ತರುವ ವಾಹನಗಳು ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನು ಇಳಿಸಿ, ನ್ಯಾಷನಲ್ ಕಾಲೇಜು ಗೌಂಡ್, ಗುರು ಕಾಲೇಜು ಎದುಗಡೆ ಇರುವ ಖಾಲಿ ಜಾಗ, ಪಿಡಿಐಟಿ ಕಾಲೇಜು ಮೈದಾನ, ಭವರ್‍ಲಾಲ್ ಲೇ-ಔಟ್, ಸಿದ್ದಾರ್ಥ ಎನ್‍ಕ್ಲೀವ್ ಪಾಕಿರ್ಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು.
ಕೊಪ್ಪಳ ಕಡೆಯಿಂದ ಬರುವ ವಾಹನಗಳು ಸಾಯಿಬಾಬ ವೃತ್ತದಲ್ಲಿ ಜನರನ್ನು ಇಳಿಸಿ, ಟಿ.ಬಿ.ಡ್ಯಾಂ ಪಾಕಿರ್ಂಗ್, ಜೂನಿಯರ್ ಕಾಲೇಜು ಮೈದಾನ ಮತ್ತು ಡಿಎಆರ್ ಗೌಂಡ್‍ನಲ್ಲಿ ವಾನಗಳನ್ನು ಪಾಕ್ ಮಾಡಬೇಕು.
ಸಂಡೂರು ಕಡೆಯಿಂದ ಬರುವ ವಾಹನಗಳು ಮಾಕರ್ಂಡೇಶ್ವರ ವೃತ್ತಗಳಲ್ಲಿ ಸಾರ್ವಜನಿಕರನ್ನು ಇಳಿಸಿ, ಎಲ್.ಎಫ್.ಎಸ್. ಶಾಲೆ ಮೈದಾನ ಮತ್ತು ವಾಲ್ಮೀಕಿ ಶಾಲೆ ಮೈದಾನ, ದೀಪಾಯನ ಶಾಲೆ ಮೈದಾನಗಳಲ್ಲಿ ಪಾಕಿರ್ಂಗ್ ಮಾಡಬೇಕು. ಬಳ್ಳಾರಿ ಕಡೆಯಿಂದ ಬರುವ ವಾಹನಗಳು ಗಾಂಧಿಚೌಕ್ ಹತ್ತಿರ ಜನರನ್ನು ಇಳಿಸಿ, ಬಳ್ಳಾರಿ ರಸ್ತೆಯ ಪಟೇಲ್ ಹೈಸ್ಕೂಲ್ ಗೌಂಡ್‍ನಲ್ಲಿ ನಿಲ್ಲಿಸಬೇಕು.
ಗಂಗಾವತಿ-ಕಂಪ್ಲಿ ಕಡೆಯಿಂದ ಬರುವ ವಾಹನಗಳು ಪುಣ್ಯಮೂರ್ತಿ ಮತ್ತು ತ್ರಿ-ಶಾಪ್ ಸರ್ಕಲ್‍ಗಳಲ್ಲಿ ಇಳಿಸಿ, ಲಕ್ಷ್ಮಿ ಸರ್ಕಲ್, ಮಲ್ಲಿಗೆ ಕ್ರಾಸ್ ಮುಖಾಂತರ ಪಿಬಿಎಸ್ ಖಾಲಿಜಾಗ, ವಾಸವಿ ಶಾಲೆ ಮೈದಾನದಲ್ಲಿ ಪಾಕಿರ್ಂಗ್ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಸೂಚಿಸಿದ್ದಾರೆ.