ನಾಳೆ ಹೆಬ್ಬಸೂರಿನಲ್ಲಿ ಶ್ರೀ ಶಾರದಾ ಪರಮೇಶ್ವರಿ ರಥೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಮೇ.19- ತಾಲೂಕಿನ ಹೆಬ್ಬಸೂರು ಗ್ರಾಮದ ಶ್ರೀಶೃಂಗೇರಿ ಶಂಕರ ಮಠದಲ್ಲಿ ಮೇ 19, 20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ 19 ರಂದು ಮಠದಲ್ಲಿ ಶ್ರೀಮಹಾಗಣಪತಿ ಹೋಮ ನಡೆಯಲಿದೆ. 20 ರಂದು ಶ್ರೀಸುಬ್ರಹ್ಮಣ್ಯ ಹೋಮ ನಡೆಯಲಿದ್ದು ಬಳಿಕ ಶ್ರೀಶಾರದಾ ಪರಮೇಶ್ವರಿಯ ಭವ್ಯ ರಥೋತ್ಸವ ಜರುಗಲಿದೆ.
ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ಮನವಿ ಮಾಡಿದೆ.